ನಾಗರಿಕರ ಮೇಲೆ ದಬ್ಬಾಳಿಕೆ ನಡೆಸಿದರೆ ಕ್ರಮ: ಸಶಸ್ತ್ರ ಪಡೆಗಳಿಗೆ ಮಣಿಪುರ ಸಂಪುಟದ ಎಚ್ಚರಿಕೆ
ಸಾಂದರ್ಭಿಕ ಚಿತ್ರ (PTI)
ಇಂಫಾಲ: ನಾಗರಿಕರ ಮೇಲೆ ದಬ್ಬಾಳಿಕೆ ನಡೆಸಿದರೆ ರಾಜ್ಯ ಮತ್ತು ಕೇಂದ್ರೀಯ ಪಡೆಗಳ ವಿರುದ್ಧ ಅಗತ್ಯ ಕ್ರಮವನ್ನು ತೆಗೆದುಕೊಳ್ಳಲು ಮಣಿಪುರ ಸಂಪುಟವು ನಿರ್ಧರಿಸಿದೆ.
ತೆಂಗ್ನೌಪಾಲ್ ಜಿಲ್ಲೆಯ ಪಲ್ಲೇಲ್ ಪಟ್ಟಣದಲ್ಲಿ ಶುಕ್ರವಾರ ಪ್ರತಿಭಟನೆ ಸಂದರ್ಭ ಭದ್ರತಾ ಪಡೆಗಳೊಂದಿಗಿನ ಘರ್ಷಣೆಯಲ್ಲಿ ಇಬ್ಬರು ನಾಗರಿಕರು ಮೃತಪಟ್ಟು, ಸುಮಾರು 50 ಜನರು ಗಾಯಗೊಂಡ ಮರುದಿನವೇ ಸರಕಾರದ ಈ ನಿರ್ಧಾರ ಹೊರಬಿದ್ದಿದೆ.
ಪ್ರತಿಭಟನಾಕಾರರ ವಿರುದ್ಧ ಕೇಂದ್ರೀಯ ಸಶಸ್ತ್ರ ಪಡೆಗಳ ಅನಗತ್ಯ ಕ್ರಮವನ್ನು ಮುಖ್ಯಮಂತ್ರಿ ಎನ್. ಬೀರೇನ್ ಸಿಂಗ್ ನೇತೃತ್ವದಲ್ಲಿ ಶನಿವಾರ ನಡೆದ ಸಂಪುಟ ಸಭೆಯು ಟೀಕಿಸಿದೆ. ರಾಜ್ಯ ಸರಕಾರವು ಈ ಕುರಿತು ಕೇಂದ್ರಕ್ಕೆ ವರದಿಯನ್ನೂ ಸಲ್ಲಿಸಲಿದೆ ಎಂದು ರಾಜ್ಯದ ಸಾರ್ವಜನಿಕ ಸಂಪರ್ಕ ಸಚಿವ ಎಸ್.ರಂಜನ್ ಅವರು ಶನಿವಾರ ಇಲ್ಲಿ ತಿಳಿಸಿದರು.
ಸಂಪುಟ ಸಭೆಯು ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆಯಡಿ ‘ಆತಂಕಿತ ಪ್ರದೇಶ’ದ ಇನ್ನೂ ಆರು ತಿಂಗಳು ವಿಸ್ತರಣೆಗೆ ಅನುಮೋದನೆಯನ್ನು ನೀಡಿದೆ ಎಂದೂ ಅವರು ಹೇಳಿದರು.
Next Story