ಮಣಿಪುರ : ಪರಿಹಾರ ಶಿಬಿರದಲ್ಲಿಯ ನಾಲ್ವರು ಮಕ್ಕಳು ನದಿಯಲ್ಲಿ ಮುಳುಗಿ ಸಾವು
ಸಾಂದರ್ಭಿಕ ಚಿತ್ರ
ಇಂಫಾಲ : ಮಣಿಪುರದ ಚುರಾಚಂದ್ರಪುರ ಜಿಲ್ಲೆಯ ಪರಿಹಾರ ಶಿಬಿರವೊಂದರಲ್ಲಿ ವಾಸವಾಗಿದ್ದ ನಾಲ್ಕರಿಂದ ಒಂಭತ್ತು ವರ್ಷ ವಯೋಮಾನದ ಓರ್ವ ಬಾಲಕ ಮತ್ತು ಮೂವರು ಬಾಲಕಿಯರು ಮಂಗಳವಾರ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ರಾಜ್ಯದಲ್ಲಿಯ ಜನಾಂಗೀಯ ಘರ್ಷಣೆಗಳಿಂದಾಗಿ ಈ ಮಕ್ಕಳ ಕುಟುಂಬಗಳು ತುಯಿಬೊವೊಂಗ್ನಲ್ಲಿಯ ಪರಿಹಾರ ಶಿಬಿರಕ್ಕೆ ಸ್ಥಳಾಂತರಗೊಂಡಿದ್ದವು.
ಮಕ್ಕಳು ಮಂಗಳವಾರ ಅಪರಾಹ್ನ ಎರಡು ಗಂಟೆಯ ಸುಮಾರಿಗೆ ಶಿಬಿರದ ಸಮೀಪ ಹರಿಯುತ್ತಿರುವ ತುಯಿಥಾ ನದಿಗೆ ಸ್ನಾನಕ್ಕೆಂದು ತೆರಳಿದ್ದರು. ಮಕ್ಕಳು ತುಂಬ ಸಮಯವಾದರೂ ಮರಳದಿದ್ದಾಗ ಅವರ ಕುಟುಂಬಗಳು ಮತ್ತು ಶಿಬಿರದಲ್ಲಿಯ ಇತರ ನಿವಾಸಿಗಳು ಅವರಿಗಾಗಿ ಹುಡುಕಾಟ ಆರಂಭಿಸಿದ್ದರು. ರಾತ್ರಿಯಿಡೀ ನಡೆದ ಶೋಧ ಕಾರ್ಯದಲ್ಲಿ ಪೋಲಿಸರೂ ಭಾಗಿಯಾಗಿದ್ದರು.
ಬುಧವಾರ ಬೆಳಿಗ್ಗೆ ಮಕ್ಕಳ ಮೃತದೇಹಗಳು ಪತ್ತೆಯಾಗಿವೆ.
Next Story