ಮಣಿಪುರ | ಬಿಜೆಪಿ ವಕ್ತಾರನ ಮನೆಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು
PC : NDTV
ಗುವಾಹಟಿ : ಜನಾಂಗೀಯ ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಬಿಜೆಪಿ ವಕ್ತಾರನ ಮನೆಗೆ ದುಷ್ಕರ್ಮಿಗಳ ಗುಂಪೊಂದು ಶನಿವಾರ ಬೆಂಕಿ ಹಚ್ಚಿದೆ.
ಬಿಜೆಪಿ ವಕ್ತಾರ ಹಾಗೂ ಕುಕಿ ಪ್ರಾಬಲ್ಯದ ಚುರಾಚಂದಪುರ ಜಿಲ್ಲೆಯ ಬುಡಕಟ್ಟು ನಾಯಕ ಟಿ. ಮೈಕಲ್ ಲಮ್ಜತಾಂಗ್ ಹಾವೋಕಿಪ್ ಅವರ ನಿವಾಸಕ್ಕೆ ದುಷ್ಕರ್ಮಿಗಳ ಗುಂಪೊಂದು ಬೆಂಕಿ ಹಚ್ಚಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ಒಂದು ವರ್ಷದಲ್ಲಿ ಅವರ ನಿವಾಸದ ಮೇಲೆ ನಡೆಯುತ್ತಿರುವ ಮೂರನೇ ದಾಳಿ ಇದಾಗಿದೆ.
Next Story