ಮಣಿಪುರ, ನಾಗಾಲ್ಯಾಂಡ್, ಮಿಜೋರಾಂ 13 ವರ್ಷಗಳ ಬಳಿಕ ಮತ್ತೆ ಸಂರಕ್ಷಿತ ಪ್ರದೇಶ
ಸಾಂದರ್ಭಿಕ ಚಿತ್ರ | PC : thehindu.com
ಇಂಫಾಲ: ನೆರೆಯ ದೇಶಗಳಿಂದ ನುಸುಳುವಿಕೆಯಿಂದಾಗಿ ಹೆಚ್ಚುತ್ತಿರುವ ಭದ್ರತಾ ಕಳವಳಗಳ ನಡುವೆ ಕೇಂದ್ರ ಸರಕಾರವು ಮಣಿಪುರ,ನಾಗಾಲ್ಯಾಂಡ್ ಮತ್ತು ಮಿರೆರಮ್ಗಳಲ್ಲಿ ಸಂರಕ್ಷಿತ ಪ್ರದೇಶ ಆಡಳಿತವನ್ನು ಮರುಸ್ಥಾಪಿಸಿದೆ.
ಇದರಿಂದಾಗಿ ಈ ಮೂರು ಈಶಾನ್ಯ ರಾಜ್ಯಗಳಿಗೆ ಭೇಟಿ ನೀಡುವ ವಿದೇಶಿಯರು 1958ರ ವಿದೇಶಿಯರ ಸಂರಕ್ಷಿತ ಪ್ರದೇಶಗಳ ಆದೇಶಕ್ಕೆ ಅನುಗುಣವಾಗಿ ಸಂರಕ್ಷಿತ ಪ್ರದೇಶ ಅನುಮತಿಯನ್ನು ಪಡೆದುಕೊಳ್ಳುವುದು ಅಗತ್ಯವಾಗುತ್ತದೆ.
1958ರ ಆದೇಶವು ಅರುಣಾಚಲ ಪ್ರದೇಶ,ಸಿಕ್ಕಿಂ,ಮಣಿಪುರ,ನಾಗಾಲ್ಯಾಂಡ್ ಮತ್ತು ಮಿಜೋರಾಂಗಳನ್ನು ಸಂಪೂರ್ಣವಾಗಿ ಹಾಗೂ ಜಮ್ಮುಕಾಶ್ಮೀರ,ಹಿಮಾಚಲ ಪ್ರದೇಶ,ರಾಜಸ್ಥಾನ ಮತ್ತು ಉತ್ತರಾಖಂಡ್ಗಳನ್ನು ಭಾಗಶಃ ಸಂರಕ್ಷಿತ ಪ್ರದೇಶಗಳೆಂದು ವ್ಯಾಖ್ಯಾನಿಸಿದೆ.
2011ರಲ್ಲಿ ಕೇಂದ್ರವು ಪ್ರವಾಸೋದ್ಯಮವನ್ನು ಉತ್ತೇಜಿಸಲು ಮಣಿಪುರ, ನಾಗಾಲ್ಯಾಂಡ್ ಮತ್ತು ಮಿರೆರಮ್ಗಳನ್ನು ಸಂರಕ್ಷಿತ ಪ್ರದೇಶಗಳ ಪಟ್ಟಿಯಿಂದ ಕೈಬಿಟ್ಟಿತ್ತು.
ಇನ್ನು ಮಂದೆ ರಾಜ್ಯಕ್ಕೆ ಭೇಟಿ ನೀಡುವ ವಿದೇಶಿಯರ ಬಗ್ಗೆ ನಿಕಟ ನಿಗಾ ವಹಿಸಲಾಗುವುದು ಎಂದು ಮಣಿಪುರ ಸರಕಾರವು ಹೇಳಿದೆ.