ಮಣಿಪುರ: ಕುಕಿ, ಮೈತೇಯಿ ಜನವಸತಿ ಪ್ರದೇಶಗಳ ನಡುವಿನ ಚೆಕ್ ಪಾಯಿಂಟ್ನಿಂದ ಅಸ್ಸಾಂ ರೈಫಲ್ಸ್ ಪಡೆ ವಾಪಸ್ ಪಡೆದ ಸರ್ಕಾರ
ಸಾಂದರ್ಭಿಕ ಚಿತ್ರ (PTI)
ಇಂಫಾಲ್: ಮಣಿಪುರದಲ್ಲಿ ಮೈತೇಯಿ ಮತ್ತು ಕುಕಿ ಬಾಹುಳ್ಯ ಪ್ರದೇಶಗಳ ನಡುವಿನ ನಿರ್ಣಾಯಕ ಬಫರ್ ವಲಯ ಪ್ರದೇಶದಲ್ಲಿ ನಿಯೋಜಿಸಲಾಗಿದ್ದ ಅಸ್ಸಾಂ ರೈಫಲ್ಸ್ ಸಿಬ್ಬಂದಿ ಸ್ಥಾನದಲ್ಲಿ ರಾಜ್ಯ ಪೊಲೀಸರು ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆಯ ಸಿಬ್ಬಂದಿಗಳನ್ನು ನೇಮಿಸಿ ಮಣಿಪುರ ಸರ್ಕಾರ ಸೋಮವಾರ ಆದೇಶವೊಂದನ್ನು ಹೊರಡಿಸಿದೆ.
ಬಿಷ್ಣುಪುರ್ ಜಿಲ್ಲೆಯ ಮೊಯಿರಂಗ್ ಲಮ್ಖೈ ಪ್ರದೇಶ ಮತ್ತು ಚುರಚಂದಪುರ ಜಿಲ್ಲೆಯ ಕಂಗ್ವೈ ಗ್ರಾಮದ ನಡುವಿನ ಚೆಕ್ಪಾಯಿಂಟ್ನಲ್ಲಿನ ಸಿಬ್ಬಂದಿಗಳನ್ನು ಬದಲಾಯಿಸಲಾಗಿದೆ. ಬಿಷ್ಣುಪುರ್ ಮೀಟಿ ಬಾಹುಳ್ಯದ ಜಿಲ್ಲೆಯಾದರೆ ಚುರಚಂದಪುರ ಕೂಕಿಗಳ ಬಾಹುಳ್ಯ ಹೊಂದಿದೆ.
ಸರಕಾರದ ಈ ಆದೇಶದ ಹಿಂದಿನ ಕಾರಣ ತಿಳಿದು ಬಂದಿಲ್ಲವಾದರೂ, ಅರೆಸೇನಾ ಪಡೆಗಳನ್ನು ವಾಪಸ್ ಪಡೆಯಬೇಕೆಂದು ಇಂಫಾಲ ಕಣಿವೆಯಲ್ಲಿ ಮೈತೇಯಿ ಮಹಿಳಾ ಹೋರಾಟಗಾರರಾದ ಮೀರಾ ಪೈಬಿಗಳು ಹಲವು ಪ್ರತಿಬಟನೆಗಳನ್ನು ನಡೆಸಿದ ನಂತರ ಈ ಕ್ರಮಕೈಗೊಳ್ಳಲಾಗಿದೆ.
ಅಸ್ಸಾಂ ರೈಫಲ್ಸ್ ಸಿಬ್ಬಂದಿ ನೇರವಾಗಿ ಅಥವಾ ಪರೋಕ್ಷವಾಗಿ ಒಂದು ನಿರ್ದಿಷ್ಟ ಸಮುದಾಯವನ್ನು ಬೆಂಬಲಿಸುತ್ತಿದ್ದಾರೆಂದು ಬಿಜೆಪಿಯ ಮಣಿಪುರ ಘಟಕದ ಉಪಾಧ್ಯಕ್ಷ ಚಿದಾನಂದ ಸಿಂಗ್ ಆರೋಪಿಸಿದ್ದರು.
ಸೂಕ್ಷ್ಮ ಪ್ರದೇಶಗಳಿಂದ ಅಸ್ಸಾಂ ರೈಫಲ್ಸ್ ಪಡೆಯನ್ನು ವಾಪಸ್ ಪಡೆಯಲಾಗುತ್ತಿದೆ ಎಂಬ ವರದಿಗಳನ್ನು ಅಸ್ಸಾಂ ರೈಫಲ್ಸ್ ನಿರಾಕರಿಸಿದೆ.
ಇನ್ನೊಂದು ಬೆಳವಣಿಗೆಯಲ್ಲಿ ಮಣಿಪುರ ಪೊಲೀಸರು ಆಗಸ್ಟ್ 5ರಂದು ಎಫ್ಐಆರ್ ದಾಖಲಿಸಿ ಕುManipur removes Assam Rifles from key check post in buffer zone between Kuki and Meitei strongholdsಕಿ ತೀವ್ರಗಾಮಿಗಳ ಶೋಧ ಕಾರ್ಯಾಚರಣೆಗೆ ಅಸ್ಸಾಂ ರೈಫಲ್ಸ್ ಸಿಬ್ಬಂದಿ ಅಡ್ಡಿಪಡಿಸಿದ್ದಾರೆಂದು ಆರೋಪಿಸಿದ್ದಾರೆ.