ಮಣಿಪುರ: ಸದನಲ್ಲಿ ಚರ್ಚಿಸಲು ಪ್ರಧಾನಿಗೆ ಸೋನಿಯಾ ಆಗ್ರಹ
Photo: ಸೋನಿಯಾಗಾಂಧಿ | PTI
ಹೊಸದಿಲ್ಲಿ: ಸಂಸತ್ ನಲ್ಲಿ ಮಣಿಪುರ ಹಿಂಸಾಚಾರದ ಬಗ್ಗೆ ಸಂಸತ್ ನಲ್ಲಿ ಚರ್ಚೆಯಾಗಬೇಕೆಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕಿ ಸೋನಿಯಾಗಾಂಧಿ ಗುರುವಾರ ಆಗ್ರಹಿಸಿದ್ದಾರೆ.
ಲೋಕಸಭಾ ಅಧಿವೇಶನದ ಆರಂಭಕ್ಕೆ ಮುನ್ನ ಸಂಪ್ರದಾಯದಂತೆ ಪ್ರಧಾನಿಯವರು ಎಲ್ಲಾ ಪಕ್ಷಗಳ ನಾಯಕರನ್ನು ಸ್ವಾಗತಿಸಲು ಬಂದಾಗ, ಅವರೊಂದಿಗೆ ಸಂಕ್ಷಿಪ್ತ ಮಾತುಕತೆ ನಡೆಸಿದ ಸೋನಿಯಾಗಾಂಧಿ ಅವರು, ಮಣಿಪುರ ಹಿಂಸಾಚಾರದ ಬಗ್ಗೆ ಸದನದಲ್ಲಿ ಚರ್ಚೆಗೆ ಆಗ್ರಹಿಸಿದರು ಎಂದು ಲೋಕಸಭೆಯಲ್ಲಿನ ಕಾಂಗ್ರೆಸ್ ನಾಯಕ ಅಧಿರ್ ರಂಜನ್ ಚೌಧುರಿ ತಿಳಿಸಿದ್ದಾರೆ.
‘‘ಲೋಕಸಭೆಯಲ್ಲಿ ಮಣಿಪುರ ಪರಿಸ್ಥಿತಿಯ ಬಗ್ಗೆ ಚರ್ಚೆಯಾಗಬೇಕೆಂದು ಸೋನಿಯಾ ಅವರು ಪ್ರಧಾನಿಯನ್ನು ಆಗ್ರಹಿಸಿದರು. ಅದನ್ನು ಪ್ರಧಾನಿಯವರು ನಿರೀಕ್ಷಿಸಿರಲಿಕ್ಕಿಲ್ಲವೆಂದು ನಾನು ಭಾವಿಸುತ್ತೇನೆ ಎಂದು ಅಧಿರ್ ಸುದ್ದಿಗಾರರಿಗೆ ತಿಳಿಸಿದರು.
ಸೋನಿಯಾ ಮಾತಿಗೆ ಪ್ರಧಾನಿ ಮೋದಿವರು ‘ಸರಿ, ನೋಡೋಣ’ ಎಂದು ಉತ್ತರಿಸಿದ್ದಾಗಿ ಚೌಧುರಿ ಹೇಳಿದರು. ಇಂದು ಕಲಾಪ ಆರಂಭಗೊಂಡಾಗ ಸೋನಿಯಾ ಅವರು ಪ್ರತಿಪಕ್ಷಗಳ ಪರವಾಗೀ ಬಗ್ಗೆ ಬೇಡಿಕೆಯಿರಿರಿಸಿದರು’’ ಎಂದು ಚೌಧುರಿ ಹೇಳಿದರು.