ಮಣಿಪುರ: ಗುಂಪು ದಾಳಿಯಲ್ಲಿ ಮೂವರು ಬಿಎಸ್ಎಫ್ ಯೋಧರಿಗೆ ಗುಂಡಿನ ಗಾಯ
Photo: PTI
ಇಂಫಾಲ : ಮಣಿಪುರದ ಥೌಬಾಲ್ನಲ್ಲಿ ಬುಧವಾರ ತಡರಾತ್ರಿ ಪೋಲಿಸ್ ಕೇಂದ್ರ ಕಚೇರಿಗೆ ನುಗ್ಗಲು ಯತ್ನಿಸಿದ್ದ ಗುಂಪಿನಲ್ಲಿದ್ದ ಬಂದೂಕುಧಾರಿಗಳ ಗುಂಡೇಟಿನಿಂದ ಕನಿಷ್ಠ ಮೂವರು ಬಿಎಸ್ಎಫ್ ಸಿಬ್ಬಂದಿಗಳು ಗಾಯಗೊಂಡಿದ್ದಾರೆ ಎಂದು ಪೋಲಿಸರು ಗುರುವಾರ ತಿಳಿಸಿದರು. ಘಟನೆಯ ಹಿನ್ನೆಲೆಯಲ್ಲಿ ಥೌಬಾಲ್ ನಲ್ಲಿ ಕರ್ಫ್ಯೂ ಹೇರಲಾಗಿದೆ.
ಗುಂಪು ಮೊದಲು ಥೌಬಾಲ್ ನ ಖಂಗಬಕ್ ನಲ್ಲಿ ಮೂರನೇ ಇಂಡಿಯನ್ ರಿಸರ್ವ್ ಬೆಟಾಲಿಯನನ್ನು ಗುರಿಯಾಗಿಸಿಕೊಂಡಿತ್ತು ಮತ್ತು ಭದ್ರತಾ ಪಡೆಗಳು ಕನಿಷ್ಠ ಬಲವನ್ನು ಪ್ರಯೋಗಿಸಿ ಅದನ್ನು ಚದುರಿಸಿತ್ತು. ಗಾಯಗೊಂಡಿರುವ ಬಿಎಸ್ಎಫ್ ಸಿಬ್ಬಂದಿಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
Next Story