ದಕ್ಷಿಣ ಏಷ್ಯಾದಲ್ಲಿ 2023ರಲ್ಲಿ ಹಿಂಸೆ, ಸಂಘರ್ಷದಿಂದ ನಿರ್ವಸಿತರಾದವರ ಪೈಕಿ ಮಣಿಪುರದ ಪಾಲು ಶೇ 97: ವರದಿ
ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ದಕ್ಷಿಣ ಏಷ್ಯಾದಲ್ಲಿ ಸಂಘರ್ಷ ಮತ್ತು ಹಿಂಸೆಯಿಂದ 2023ರಲ್ಲಿ 69,000 ಜನರು ನಿರ್ವಸಿತರಾಗಿದ್ದರೆ ಅವರಲ್ಲಿ 67,000 ಜನರು ಮಣಿಪುರದವರು ಎಂದು ಜಿನೀವಾ ಮೂಲದ ಇಂಟರ್ನಲ್ ಡಿಸ್ಪ್ಲೇಸ್ಮೆಂಟ್ ಮಾನಿಟರಿಂಗ್ ಸೆಂಟರ್ ವರದಿ ಹೇಳಿದೆ. ಭಾರತದಲ್ಲಿ 2018ರಿಂದ ಸಂಘರ್ಷ ಮತ್ತು ಹಿಂಸೆಯಿಂದ ನಿರ್ವಹಿಸಿತರಾದವರ ಸಂಖ್ಯೆ ಮಣಿಪುರದಲ್ಲಿ ಗರಿಷ್ಠವಾಗಿದೆ ಎಂದು ವರದಿ ಹೇಳಿದೆ.
ಹಿಂಸೆಯಿಂದ ನಿರ್ವಸಿತರಾದವರು ಇನ್ನೂ ನಿರ್ವಸಿತರಾಗಿಯೇ ಉಳಿದಿದ್ದಾರೆ ಎಂದು ವರದಿ ಹೇಳಿದೆ. 2023ರ ಅಂತ್ಯದ ವೇಳೆಗೆ ಒಟ್ಟು 53 ಲಕ್ಷ ಜನರು ದಕ್ಷಿಣ ಏಷ್ಯಾದಲ್ಲಿ ಆಂತರಿಕ ಸಂಘರ್ಷ, ಹಿಂಸಾಚಾರದಿಂದ ನಿರ್ವಸಿತರಾಗಿದ್ದಾರೆ, ಅವರಲ್ಲಿ ಶೇ 80ರಷ್ಟು ಜನರು ಅಫ್ಗಾನಿಸ್ತಾನದವರು ಎಂದು ವರದಿ ಹೇಳಿದೆ.
Next Story