ಮಣಿಪುರ ಹಿಂಸಾಚಾರ; ದುಷ್ಕರ್ಮಿಗಳಿಂದ 5 ಮನೆಗಳಿಗೆ ಬೆಂಕಿ
Photo: PTI
ಇಂಫಾಲ: ಮಣಿಪುರದ ರಾಜಧಾನಿ ಇಂಫಾಲದ ನ್ಯೂ ಚೆಕ್ಕೋನ್ ಪ್ರದೇಶದಲ್ಲಿ ದುಷ್ಕರ್ಮಿಗಳು ರವಿವಾರ ಅಪರಾಹ್ನ 5 ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ. ಇಂಫಾಲ ಪೂರ್ವ ಜಿಲ್ಲೆಯ ಕುಕಿ ಪ್ರಾಬಲ್ಯ ಪ್ರದೇಶವಾಗಿದ್ದು, ಇಲ್ಲಿನ ಕುಕಿ ಹಾಗೂ ಮೈತೈ ಸಮುದಾಯದ ಮನೆಗಳು ಬೆಂಕಿಗಾಹುತಿಯಾಗಿವೆ. ಬೆಂಕಿ ಹರಡುವುದಕ್ಕಿಂತ ಮುನ್ನ ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು.
ಈ ಪ್ರದೇಶದಲ್ಲಿ ದೊಡ್ಡ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿದ ಹೊರತಾಗಿಯೂ ಈ ಘಟನೆ ನಡೆದಿದೆ. ಘಟನೆ ನಡೆದ ಬಳಿಕ ಜನರು ಜಮಾಯಿಸಿದ್ದಾರೆ ಹಾಗೂ ಈ ಪ್ರದೇಶ ಪ್ರವೇಶಿಸಲು ಪ್ರಯತ್ನಿಸಿದ್ದಾರೆ. ಈ ಸಂದರ್ಭ ಭದ್ರತಾ ಸಿಬ್ಬಂದಿ ಅಶ್ರುವಾಯು ಶೆಲ್ ಗಳನ್ನು ಸಿಡಿಸಿ ಜನರನ್ನು ಚದುರಿಸಿದ್ದಾರೆ. ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಭದ್ರತೆ ಬಿಗಿಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story