ಮರಾಠಾ ಮೀಸಲಾತಿ: ಸೆ.16ರಿಂದ ಅನಿರ್ದಿಷ್ಟಾವಧಿ ಉಪವಾಸ ಆರಂಭಿಸಲಿರುವ ಮನೋಜ ಜಾರಂಗೆ
ಮನೋಜ ಜಾರಂ | PC : PTI
ಛತ್ರಪತಿ ಸಂಭಾಜಿನಗರ(ಮಹಾರಾಷ್ಟ್ರ): ಮರಾಠಾ ಮೀಸಲಾತಿಗೆ ಒತ್ತಾಯಿಸಲು ಸೆ.16ರ ಮಧ್ಯರಾತ್ರಿಯಿಂದ ಅನಿರ್ದಿಷ್ಟಾವಧಿ ಉಪವಾಸವನ್ನು ಆರಂಭಿಸುವುದಾಗಿ ಸಾಮಾಜಿಕ ಹೋರಾಟಗಾರ ಮನೋಜ ಜಾರಂಗೆ ಮಂಗಳವಾರ ಪ್ರಕಟಿಸಿದರು.
ಕಳೆದ ಫೆಬ್ರವರಿಯಲ್ಲಿ ಮಹಾರಾಷ್ಟ್ರ ಶಾಸಕಾಂಗವು ಶಿಕ್ಷಣ ಮತ್ತು ಸರಕಾರಿ ಉದ್ಯೋಗಗಳಲ್ಲಿ ಮರಾಠಾ ಸಮುದಾಯಕ್ಕೆ ಶೇ.10ರಷ್ಟು ಮೀಸಲಾತಿಯನ್ನು ಒದಗಿಸುವ ಮಸೂದೆಯನ್ನು ಅಂಗೀಕರಿಸಿತ್ತು. ಆದರೆ ಒಬಿಸಿ ವರ್ಗದಲ್ಲಿ ಮರಾಠಾಗಳ ಸೇರ್ಪಡೆಗಾಗಿ ಜಾರಂಗೆ ಪಟ್ಟು ಹಿಡಿದಿದ್ದಾರೆ.
ಜಾಲ್ನಾ ಜಿಲ್ಲೆಯ ಅಂತರವಾಲಿ ಸರಾಟಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಾರಂಗೆ,‘ಸೆ.17 ಮುಕ್ತಿ ಸಂಗ್ರಾಮ ದಿನ(ಮರಾಠವಾಡಾ ವಿಮೋಚನಾ ದಿನ)ವಾಗಿದ್ದು, ಅಂದೇ ನಾವು ಮೀಸಲಾತಿ ಬೇಡಿಕೆಯನ್ನು ಮುಂದಿಟ್ಟುಕೊಂಡು ಅನಿರ್ದಿಷ್ಟಾವಧಿ ಉಪವಾಸವನ್ನು ಆರಂಭಿಸುತ್ತೇವೆ. ಸೆ.16ರ ಮಧ್ಯರಾತ್ರಿಯಿಂದ ನಾವು ಉಪವಾಸಕ್ಕೆ ಕುಳಿತುಕೊಳ್ಳಲಿದ್ದೇವೆ ’ಎಂದು ತಿಳಿಸಿದರು.
Next Story