ಹಿಂದೂ ಭಕ್ತರ ಮೇಲಿನ ದಾಳಿ ಖಂಡಿಸಿ ದಿಲ್ಲಿಯ ಕೆನಡಾ ರಾಯಭಾರಿ ಕಚೇರಿ ಬಳಿ ಪ್ರತಿಭಟನೆ
Screengrab:X/ANI
ಹೊಸದಿಲ್ಲಿ: ಕೆನಡಾದಲ್ಲಿನ ಹಿಂದೂ ದೇವಾಲಯದ ಬಳಿ ಭಕ್ತರ ಮೇಲಿನ ದಾಳಿಯನ್ನು ಖಂಡಿಸಿ ದಿಲ್ಲಿಯ ಕೆನಡಾ ಹೈಕಮಿಷನ್ ಹೊರಗೆ ರವಿವಾರ ಹಿಂದೂ ಸಿಖ್ ಗ್ಲೋಬಲ್ ಫೋರಂ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ.
ನೂರಾರು ಪ್ರತಿಭಟನಕಾರರು ಬ್ಯಾರಿಕೇಡ್ ಗಳನ್ನು ಕೆಡವಿ, ಹಿಂದೂ-ಸಿಖ್ ಐಕ್ಯತೆಗಾಗಿ ಘೋಷಣೆಗಳನ್ನು ಕೂಗಿದ್ದಾರೆ. ಹಿಂದೂಗಳು ಮತ್ತು ಸಿಖ್ಖರು ಒಗ್ಗಟ್ಟಾಗಿದ್ದಾರೆ ಮತ್ತು ಕೆನಡಾದಲ್ಲಿ ದೇವಾಲಯಗಳ ಮೇಲಿನ ದಾಳಿಯನ್ನು ಭಾರತೀಯರು ಸಹಿಸುವುದಿಲ್ಲ ಎಂಬ ಘೋಷಣಾ ಫಲಕಗಳನ್ನು ಪ್ರದರ್ಶಿಸಿದ್ದಾರೆ.
ಪ್ರತಿಭಟನೆ ಹಿನ್ನೆಲೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಹೊಸದಿಲ್ಲಿಯ ಕೆನಡಾದ ಹೈ ಕಮಿಷನ್ ಎದುರು ಬಿಗಿ ಭದ್ರತೆ ವ್ಯವಸ್ಥೆ ಮಾಡಲಾಗಿತ್ತು. ದಿಲ್ಲಿ ಪೊಲೀಸರು ಹೆಚ್ಚಿನ ಸಂಖ್ಯೆಯ ಸಿಬ್ಬಂದಿಯನ್ನು ನಿಯೋಜಿಸಿದ್ದು, ಹೈಕಮಿಷನ್ ಮುಂದೆ ಬ್ಯಾರಿಕೇಡ್ ಗಳನ್ನು ಅಳವಡಿಸಿದ್ದರು.
ನವೆಂಬರ್ 4ರಂದು ಕೆನಡಾದ ಬ್ರಾಂಪ್ಟನ್ ನಲ್ಲಿರುವ ಹಿಂದೂ ಸಭಾ ಮಂದಿರದ ಹೊರಗೆ ಭಕ್ತರ ಮೇಲೆ ಹಲ್ಲೆ ನಡೆಸಲಾಗಿತ್ತು. ಘಟನೆಯನ್ನು ಭಾರತ ಖಂಡಿಸಿತ್ತು.
Next Story