ಮಣಿಪುರದ ಒಂದು ಜಿಲ್ಲೆಯಲ್ಲಿ ಶಾಂತಿ ಒಪ್ಪಂದ ಮಾಡಿಕೊಂಡ ಮೈತೈ- ಕುಕಿ ಗುಂಪುಗಳು
Photo: PTI
ಗುವಾಹತಿ: ಒಂದು ವರ್ಷದಲ್ಲಿ ಜನಾಂಗೀಯ ಸಂಘರ್ಷದಿಂದ ಜರ್ಜರಿತವಾಗಿರುವ ಮಣಿಪುರದ ಜಿರಿಬಾಂ ಜಿಲ್ಲೆಯಲ್ಲಿ ಕುಕಿ-ಚಿನ್-ಝೋ ಸಮುದಾಯಕ್ಕೆ ಸೇರಿದ ಹ್ಮಾರ್ ಮತ್ತು ಮೈತೈ ಜನಾಂಗದ ನಡುವೆ ಶಾಂತಿ ಒಪ್ಪಂದ ಏರ್ಪಡಿಸುವಲ್ಲಿ ಬಿಜೆಪಿ ಸರ್ಕಾರ ಯಶಸ್ವಿಯಾಗಿದೆ ಎಂದು Times of India ವರದಿ ಮಾಡಿದೆ.
ಇದು ಕೇವಲ ಜಿರಿಬಾಂ ಜಿಲ್ಲೆಗೆ ಸೀಮಿತವಾಗಿದ್ದರೂ, ಇದನ್ನು ಸರ್ಕಾರ ದೊಡ್ಡ ಸಾಧನೆ ಎಂದು ಬಿಂಬಿಸಿದೆ. ಮಣಿಪುರದ ಎಲ್ಲ ಕಣಿವೆ ಮತ್ತು ಬೆಟ್ಟಪ್ರದೇಶಗಳಲ್ಲಿ ಶಾಂತಿ ಮರುಸ್ಥಾಪನೆಯ ತಮ್ಮ ಯೋಜನೆಯನ್ನು ಈಡೇರಿಸುವ ನಿಟ್ಟಿನಲ್ಲಿ ದೊಡ್ಡ ಹೆಜ್ಜೆ ಎಂದು ಬಣ್ಣಿಸಿದೆ.
ಜಿಲ್ಲೆಯಲ್ಲಿ ದೊಂಬಿ ಮತ್ತು ಗುಂಡು ಹಾರಿಸುವುದನ್ನು ತಡೆಯುವ ಮತ್ತು ಸಹಜ ಸ್ಥಿತಿಯನ್ನು ಸ್ಥಾಪಿಸುವ ನಿಟ್ಟಿನಲ್ಲಿ ಎಲ್ಲ ಪ್ರಯತ್ನಗಳನ್ನು ಉಭಯ ಬಣಗಳು ಮಾಡಲಿವೆ ಎಂದು ನಿರ್ಣಯ ಆಂಗೀಕರಿಸಲಾಗಿದೆ.
ಈ ಒಪ್ಪಂದ ಒಂದು ಜಿಲ್ಲೆಗೆ ಸೀಮಿತವಾಗಿದ್ದರೂ, ಎರಡು ಸಮುದಾಯಗಳ ನಡುವಿನ ಸಂಘರ್ಷವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಇದು ಮೊದಲ ಹೆಜ್ಜೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.