ಡಿ.31ರವರೆಗೆ ಪ್ರತಿ ಟನ್ ಈರುಳ್ಳಿಗೆ 800 ಡಾಲರ್ ಕನಿಷ್ಠ ರಫ್ತು ಬೆಲೆ ನಿಗದಿ
File Photo
ಹೊಸದಿಲ್ಲಿ,ಅ.28: ದೇಶಿಯ ಮಾರುಕಟ್ಟೆಯಲ್ಲಿ ಲಭ್ಯತೆಯನ್ನು ಹೆಚ್ಚಿಸಲು ಮತ್ತು ಬೆಲೆಗಳನ್ನು ನಿಯಂತ್ರಿಸಲು ಸರಕಾರವು ಶನಿವಾರ ಪ್ರತಿ ಟನ್ ಈರುಳ್ಳಿಗೆ 800 ಡಾ.ಗಳ ಕನಿಷ್ಠ ರಫ್ತು ಬೆಲೆಯನ್ನು ನಿಗದಿಗೊಳಿಸಿದೆ. ಈ ದರವು ಡಿ.31ರವರೆಗೆ ಜಾರಿಯಲ್ಲಿರುತ್ತದೆ.
ಈರುಳ್ಳಿ ರಫ್ತಿನ ಮೇಲೆ ನಿರ್ಬಂಧ ಹೇರಲಾಗಿಲ್ಲ. 2023,ಡಿ.31ರವರೆಗೆ ಪ್ರತಿ ಟನ್ ಈರುಳ್ಳಿಗೆ 800 ಡಾಲರ್ಗಳ ಕನಿಷ್ಠ ರಫ್ತು ದರವನ್ನು ವಿಧಿಸಲಾಗಿದೆ ಎಂದು ವಿದೇಶ ವ್ಯಾಪಾರ ಮಹಾ ನಿರ್ದೇಶನಾಲಯವು ಅಧಿಸೂಚನೆಯಲ್ಲಿ ತಿಳಿಸಿದೆ.
ಪೂರೈಕೆಯಲ್ಲಿ ಕೊರತೆಯಿಂದಾಗಿ ದಿಲ್ಲಿಯ ಚಿಲ್ಲರೆ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆಗಳು ಪ್ರತಿ ಕೆಜಿಗೆ 65-80 ರೂ.ಗೆ ಏರಿಕೆಯಾಗಿವೆ.
Next Story