ಮಿಜೋರಾಂ | 8 ಕೋ.ರೂ.ಮೌಲ್ಯದ ಬರ್ಮಾ ಅಡಿಕೆ, ವಿದೇಶಿ ಸಿಗರೇಟ್ಗಳು ವಶ
ಸಾಂದರ್ಭಿಕ ಚಿತ್ರ | PC : freepik.com
ಐಜ್ವಾಲ್ : ಅಸ್ಸಾಂ ರೈಫಲ್ಸ್ ಸಿಬ್ಬಂದಿಗಳು ಪೂರ್ವ ಮಿರೆರಮ್ನ ಚಂಫಾಯಿ ಮತ್ತು ರಾಜ್ಯದ ದಕ್ಷಿಣ ತುದಿಯ ಲಾವಂಗ್ಟಲೈ ಜಿಲ್ಲೆಗಳ ಭಾರತ-ಮ್ಯಾನ್ಮಾರ್ ಗಡಿಯಲ್ಲಿ ನಡೆಸಿದ ಎರಡು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಕಳ್ಳ ಸಾಗಣೆ ಮಾಡಲಾಗಿದ್ದ ಬರ್ಮಾ ಅಡಿಕೆ ಮತ್ತು ವಿದೇಶಿ ಸಿಗರೇಟ್ಗಳನ್ನು ವಶಪಡಿಸಿಕೊಂಡಿದ್ದು,ಇವುಗಳ ಒಟ್ಟು ಮೌಲ್ಯ ಎಂಟು ಕೋ.ರೂ.ಗೂ ಅಧಿಕವಾಗಿದೆ ಎಂದು ಅಧಿಕಾರಿಯೋರ್ವರು ಶುಕ್ರವಾರ ತಿಳಿಸಿದರು.
ಬುಧವಾರ ಲಾವಂಗ್ಟಲೈ ಜಿಲ್ಲೆಯ ಚೆರ್ಹಲುನ್ ಪ್ರದೇಶದಲ್ಲಿ ಮ್ಯಾನ್ಮಾರ್ನಿಂದ ಕಳ್ಳ ಸಾಗಣೆ ಮಾಡಲಾಗಿದ್ದ 7.8 ಕೋ.ರೂ.ಮೌಲ್ಯದ ವಿದೇಶಿ ಸಿಗರೇಟ್ಗಳ 600 ಪೆಟ್ಟಿಗೆಗಳನ್ನು ವಶಪಡಿಸಿಕೊಳ್ಳಲಾಗಿದ್ದರೆ,ಅದೇ ದಿನ ಚಂಫಾಯಿ ಜಿಲ್ಲೆಯ ಮುಹ್ಮೆಲ್ತಾ ಪ್ರದೇಶದಲ್ಲಿ 30.8 ಲ.ರೂ.ಮೌಲ್ಯದ 4,400 ಕೆ.ಜಿ ಬರ್ಮಾ ಅಡಿಕೆಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿ ತಿಳಿಸಿದರು.
Next Story