ಉತ್ತರ ಪ್ರದೇಶ | ಔರಂಗಜೇಬ್ ಭಿತ್ತಿಚಿತ್ರ ಎಂದು ಭಾವಿಸಿ ಬಹದ್ದೂರ್ ಷಾ ಜಾಫರ್ ಭಿತ್ತಿಚಿತ್ರಕ್ಕೆ ಕಪ್ಪು ಬಣ್ಣ ಬಳಿದ ಹಿಂದುತ್ವ ಗುಂಪು

Screengrab: X/@zoo_bear
ಗಾಝಿಯಾಬಾದ್ : ಉತ್ತರ ಪ್ರದೇಶದ ಗಾಝಿಯಾಬಾದ್ನ ರೈಲ್ವೆ ನಿಲ್ದಾಣದಲ್ಲಿ ಮೊಘಲ್ ದೊರೆ ಔರಂಗಜೇಬ್ ಅವರದ್ದು ಎಂದು ತಪ್ಪಾಗಿ ಭಾವಿಸಿ ಮೊಘಲ್ ಚಕ್ರವರ್ತಿ ಬಹದ್ದೂರ್ ಷಾ ಜಾಫರ್ ಅವರ ಭಿತ್ತಿಚಿತ್ರಕ್ಕೆ ಹಿಂದುತ್ವ ಗುಂಪಿನ ಸದಸ್ಯರು ಕಪ್ಪು ಬಣ್ಣವನ್ನು ಬಳಿದಿದ್ದಾರೆ ಎಂದು ವರದಿಯಾಗಿದೆ.
ಔರಂಗಜೇಬ್ ವಿರುದ್ಧ ಘೋಷಣೆಯನ್ನು ಕೂಗುತ್ತಾ ಹಿಂದೂ ರಕ್ಷಾ ದಳದ ಸದಸ್ಯರು ಬಹದ್ದೂರ್ ಶಾ ಜಾಫರ್ ಅವರ 16 ಅಡಿ ಎತ್ತರದ ಭಿತ್ತಿಚಿತ್ರದ ಮೇಲೆ ಕಪ್ಪು ಬಣ್ಣವನ್ನು ಬಳಿದಿದ್ದಾರೆ. ಭಿತ್ತಿಚಿತ್ರದಲ್ಲಿ ಎಚ್ಆರ್ಡಿ ಎಂದು ಬರೆದಿರುವುದಲ್ಲದೆ, ಹಿಂದೂ ರಕ್ಷಾದಳ ಝಿಂದಾಬಾದ್ ಎಂದು ಘೋಷಣೆಯನ್ನು ಕೂಗಿದ್ದಾರೆ.
ಘಟನೆಗೆ ಸಂಬಂಧಿಸಿ ಅಪರಿಚಿತ ವ್ಯಕ್ತಿಗಳ ವಿರುದ್ಧ ರೈಲ್ವೆ ಕಾಯ್ದೆಯ ವಿವಿಧ ಸೆಕ್ಷನ್ಳಗಳಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಬಹದ್ದೂರ್ ಶಾ ಜಾಫರ್ ಅವರ ಭಿತ್ತಿಚಿತ್ರವನ್ನು 2016ರಲ್ಲಿ ಸಿಎಸ್ ದಿಶಾ ಫೌಂಡೇಶನ್ ಚಿತ್ರಿಸಿತ್ತು.
Hindu Raksha Dal goons blackened a painting Bahadur Shah Zafar assuming it is of Aurangzeb at the Ghaziabad Railway Station. pic.twitter.com/BDYsdeIdDt
— Mohammed Zubair (@zoo_bear) April 18, 2025