ಗಂಗಾನದಿಯನ್ನು ಸ್ವಚ್ಛಗೊಳಿಸುವ ಗ್ಯಾರಂಟಿ ಮರೆತ ಮೋದಿ

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರಾಖಂಡದ ಮುಖವಾ ದೇವಾಲಯದಲ್ಲಿ ಗಂಗಾದೇವಿಗೆ ಪೂಜೆ ಸಲ್ಲಿಸಿದ ಕೆಲವೇ ತಾಸುಗಳ ಬಳಿಕ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿದ್ದು, ನದಿಯನ್ನು ಸ್ವಚ್ಛಗೊಳಿಸುವ ಹೆಸರಿನಲ್ಲಿ ಕೇಂದ್ರ ಸರಕಾರವು ಗಂಗಾದೇವಿಗೆ ವಂಚಿಸಿದೆ ಎಂದು ಆಪಾದಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಖರ್ಗೆ ಅವರು, ‘‘ ಗಂಗಾ ಮಾತೆ ತನ್ನ್ನನ್ನು ಕರೆಸಿಕೊಂಡಿದ್ದಾಳೆಂದು ಮೋದಿ ಹೇಳಿಕೊಂಡಿದ್ದಾರೆ. ಆದರೆ ವಾಸ್ತವವಾಗಿ ಗಂಗಾನದಿಯ್ನು ಸ್ಛಚ್ಚಗೊಳಿಸುವುದಾಗಿ ನೀಡಿದ್ದ ಭರವಸೆಯನ್ನು ಅವರೀಗ ಮರೆತಿದ್ದಾರೆ ’’ಎಂದರು.
11 ವರ್ಷಗಳ ಹಿಂದೆ ನಮಾಮಿ ಗಂಗೆ ಯೋಜನೆಯನ್ನು ಆರಂಭಿಸಲಾಗಿದ್ದು, 2026ರ ಮಾರ್ಚ್‌ನಲ್ಲಿ 42,500 ಕೋಟಿ ರೂ.ಗಳ್ನು ಬಳಸಲಾಗಿತ್ತು. ಆದರೆ ಸಂಸತ್‌ನಲ್ಲಿ ಈ ಕುರಿತು ಕೇಳಲಾದ ಪ್ರಶ್ನೆಗಳಿಗೆ ನೀಡಲಾದ ಉತ್ತರದಲ್ಲಿ ಕೇವಲ 19,271 ಕೋಟಿ ರೂ.ಗಳನ್ನು 2024ರ ಡಿಸೆಂಬರ್‌ನಲ್ಲಿ ವ್ಯಯಿಸಲಾಗಿತ್ತು ಎಂದವರು ಹೇಳಿದ್ದರು.
ಮೋದಿ ಸರಕಾರವು ನಮಾಮಿ ಗಂಗಾ ಯೋಜನೆ ಶೇ.55ರಷ್ಟು ಹಣವನ್ನು ಖರ್ಚು ಮಾಡಿಲ್ಲ. ಗಂಗಾ ಮಾತೆಯ ವಿಷಯದಲ್ಲಿ ಯಾಕೆ ಇಷ್ಟೊಂದು ನಿಷ್ಕಾಳಜಿಯನ್ನು ತೋರಿಸಲಾಗುತ್ತಿದೆ ಎಂದು ಖರ್ಗೆ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ.
ಉತ್ತರಾಖಂಡದ ಮುಖವಾ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಹಾರ್ಸಿಲ್‌ನಲ್ಲಿ ನಡೆದ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ಗಂಗಾಮಾತೆಯ ಚಳಿಗಾಲದ ಸನ್ನಿಧಾನವಾದ ಮುಖವಾಕ್ಕೆ ಭೇಟಿ ನೀಡಿರುವುದು ತನ್ನ ಸೌಭಾಗ್ಯವೆಂದು ಭಾವಿಸುವುದಾಗಿ ಹೇಳಿದು.
‘ ಗಂಗಾ ಮಾತೆ ನನ್ನನ್ನು ದತ್ತು ತೆಗೆದುಕೊಂಡಿದ್ದಾಳೆಯೆಂದು ನಾನು ಭಾವಿಸುತ್ತೇನೆ. ಆಕೆಯ ಆಶೀರ್ವಾದವು ನನ್ನನು ಕಾಶಿಯೆಡೆಗೆ ಕೊಂಡೊಯ್ದಿದೆ ಹಾಗೂ ಜನರ ಸೇವೆಯನ್ನು ಸಲ್ಲಿಸುವ ಅವಕಾಶವನ್ನು ನನಗೆ ನೀಡಿದೆ ಎಂದವರು ಹೇಳಿದರು.
ಗಂಗಾನದಿಯ ಸ್ವಚ್ಛಗೊಳಿಸುವಲ್ಲಿ ಮೋದಿ ಸರಕಾರ ವಿಫಲವಾಗಿದೆಯೆಂದು ಟೀಕಿಸಿರುವ ಖರ್ಗೆ ಅವರು, 2015ರಲ್ಲಿ ಮೋದಿಜೀ ಅವರು ಗಂಗಾ ನಿಧಿ ಸ್ವಚ್ಥತೆಗಾಗಿ ಕೊಡುಗೆ ನೀಡುವಂತೆ ಎನ್‌ಆರ್‌ಐ ಸ್ನೇಹಿತರನ್ನು ಆಗ್ರಹಿಸಿದ್ದರು. 2024ರ ಮಾರ್ಚ್‌ವರೆಗೆ ಈ ನಿಧಿಗೆ 876 ಕೋಟಿ ರೂ.ಗಳನ್ನು ದೇಣಿಗೆ ನೀಡಲಾಗಿದೆ. ಈ ನಿಧಿಯ ಶೇ.53ರಷ್ಟು ನಿಧಿಯನ್ನು ಸರಕಾರಿ ನಿಧಿಯನ್ನು ಸರಕಾರಿ ಅಧೀನದ ಸಂಸ್ಥೆಗಳು ದೇಣಿಗೆಯಾಗಿ ನೀಡಿವೆ ಎಂದು ಖರ್ಗೆ ಹೇಳಿದ್ದಾರೆ.
ಗುರುವಾರ ಬೆಳಗ್ಗೆ ಪ್ರಧಾನಿ ಮೋದಿ ಅವರು ಉತ್ತರಕಾಶಿ ಜಿಲ್ಲೆಯ ಮುಖವಾ ದೇವಾಲಯದಲ್ಲಿ ಪ್ರಾರ್ಥನೆಗಳನ್ನು ಸಲ್ಲಿಸಿದರು. ಗಂಗಾನದಿಯ ಉಗಮಸ್ಥಳವಾದ ಗಂಗೋತ್ರಿಯ ದೇವಾಲಯದ ದಾರಿಯಲ್ಲಿ ಮುಖವಾ ದೇವಸ್ಥಾನವಿದೆ. ಚಳಿಗಾಲದಲ್ಲಿ ಗಂಗೋತ್ರಿ ಧಾಮದ ಬಾಗಿಲುಗಳನ್ನು ಮುಚ್ಚಲಾಗುವುದರಿಂದ ಗಂಗಾದೇವಿಯ ವಿಗ್ರಹವನ್ನು ಮುಖವಾ ದೇವಾಲಯಕ್ಕೆ ಕೊಂಡೊಯ್ಯಲಾಗುತ್ತದೆ.