ಇಂದಿನ ಪೂಜೆಯಲ್ಲಿ ಮೋದಿ ಅವರ ಪಿಎಂ ಸ್ಟೇಟಸ್ ಶೂನ್ಯ: ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೂ ಮುನ್ನ ಸುಬ್ರಮಣಿಯನ್ ಸ್ವಾಮಿ ಹೇಳಿಕೆ
ಮೋದಿ ಯಾವತ್ತೂ ಭಗವಾನ್ ರಾಮ್ ಅವರನ್ನು ಅನುಸರಿಸಿಲ್ಲ ಎಂದ ಬಿಜೆಪಿ ನಾಯಕ
ಸುಬ್ರಮಣಿಯನ್ ಸ್ವಾಮಿ (PTI)
ಹೊಸದಿಲ್ಲಿ: ಅಯೋಧ್ಯೆ ಶ್ರೀ ರಾಮ ಮಂದಿರದಲ್ಲಿ ರಾಮ ಲಲ್ಲಾ ಮೂರ್ತಿಯ ಪ್ರಾಣಪ್ರತಿಷ್ಠಾ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭಗೊಂಡಿರುವಂತೆಯೇ ಬಿಜೆಪಿ ನಾಯಕ ಹಾಗೂ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ತಮ್ಮ ಹೇಳಿಕೆ ಮೂಲಕ ವಿವಾದ ಸೃಷ್ಟಿಸಿದ್ದಾರೆ. ಪೂಜೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯ ಸ್ಟೇಟಸ್ “ಶೂನ್ಯ” ಎಂದೂ ಅವರು ಹೇಳಿದ್ದಾರೆ.
ಮೋದಿ ಅವರ ವೈಯಕ್ತಿಕ ಜೀವನವನ್ನೂ ಪ್ರಶ್ನಿಸಿದ ಅವರು, ಮೋದಿ ಯಾವತ್ತೂ ಭಗವಾನ್ ರಾಮ್ ಅವರನ್ನು ಅನುಸರಿಸಿಲ್ಲ ಎಂದರು.
“ಪೂಜೆಯಲ್ಲಿ ಮೋದಿ ಅವರ ಪಿಎಂ ಸ್ಟೇಟಸ್ ಶೂನ್ಯವಾಗಿರುವಾಗ ಅವರು ಪ್ರಾಣ ಪ್ರತಿಷ್ಠಾ ಪೂಜೆಯಲ್ಲಿ ನುಸುಳಿದ್ದಾರೆ, ಅವರು ವೈಯಕ್ತಿಕವಾಗಿ ಭಗವಾನ್ ರಾಮ್ ಅನ್ನು ಅನುಸರಿಸಿಲ್ಲ, ಪ್ರಮುಖವಾಗಿ ಅವರ ಪತ್ನಿಯ ಕುರಿತಂತೆ ಅವರು ಶ್ರೀ ರಾಮನನ್ನು ಅನುಸರಿಸಿಲ್ಲ, ಅಷ್ಟೇ ಅಲ್ಲದ ಪ್ರಧಾನಿಯಾಗಿ ರಾಮ ರಾಜ್ಯದಂತೆ ಕಳೆದೊಂದು ದಶಕದಲ್ಲಿ ಆಡಳಿತ ನಡೆಸಿಲ್ಲ,” ಎಂದು ಸ್ವಾಮಿ ಎಕ್ಸ್ ನಲ್ಲಿ ಟ್ವೀಟ್ ಮಾಡಿದ್ದಾರೆ.
ಪ್ರಾಣ ಪ್ರತಿಷ್ಠೆ ಸಮಾರಂಭದಲ್ಲಿ ಮೋದಿ ಅವರು ಮುಖ್ಯ ಯಜಮಾನ್ ಆಗಿರುವ ಹಿನ್ನೆಲೆಯಲ್ಲಿ ಸ್ವಾಮಿ ಅವರ ಹೇಳಿಕೆ ಬಂದಿದೆ.
Modi is muscling into the Prana Prathishta Puja, when his PM status is a zero in the Puja, nor has he followed Bhagwan Ram in his personal life especially in his behaviour to his wife, nor he has acted as per Ram Rajya as PM during the last decade.
— Subramanian Swamy (@Swamy39) January 22, 2024