ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣದ ಬಗ್ಗೆ ಮೋದಿ ಗಾಢ ಮೌನ: ಕಾಂಗ್ರೆಸ್ ಟೀಕೆ
ಪ್ರಜ್ವಲ್ ರೇವಣ್ಣ | PC : PTI
ಹೊಸದಿಲ್ಲಿ: ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರ ‘ಗಾಢಮೌನ’ವನ್ನು ಕಾಂಗ್ರೆಸ್ ಪಕ್ಷವು ಶನಿವಾರ ಪ್ರಶ್ನಿಸಿದೆ. ಕಳೆದ ಹತ್ತು ವರ್ಷಗಳಲ್ಲಿ ಮಹಿಳೆಯರಿಗೆ ನ್ಯಾಯವನ್ನು ಒದಗಿಸಲು ಪ್ರಧಾನಿ ವಿಫಲವಾಗಿದ್ದಾರೆಂದು ಅದು ಟೀಕಿಸಿದೆ.
ಲೈಂಗಿಕ ಹಗರಣ ಬೆಳಕಿಗೆ ಬರುತ್ತಿದ್ದಂತೆಯೇ ಪ್ರಜ್ವಲ್ ರೇವಣ್ಣ ಅವರನ್ನು ಪರಾರಿಯಾಲು ಮೋದಿ ಅವಕಾಶ ಮಾಡಿಕೊಟ್ಟಿದ್ದರು ಎಂದು ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಆಲ್ಕಾ ಲಾಂಬಾ ಆಪಾದಿಸಿದ್ದಾರೆ. ‘ಮಾಸ್ ರೇಪಿಸ್ಟ್’ನನ್ನು ಪರಾರಿಯಾಗಲು ಬಿಡುವುದೇ ’‘ಮೋದಿ ಗ್ಯಾರಂಟಿ’ಯಾಗಿದೆ ಎಂದವರು ಕಿಡಿಕಾರಿದ್ದಾರೆ.
ಹಾಸನ ಕ್ಷೇತ್ರದ ಸಂಸದರಾದ ರೇವಣ್ಣ ಅವರನ್ನು ರಾಜ್ಯ ಸರಕಾರವು ನೇಮಿಸಿದ ವಿಶೇಶ ತನಿಖಾ ತಂಡ (ಸಿಟ್)ವು ಬಂಧಿಸಿದೆ. ಇದಕ್ಕಾಗಿ ಕರ್ನಾಟಕ ಸರಕಾರವನ್ನು ತಾನು ಅಭಿನಂದಿಸುವುದಾಗಿ ಲಾಂಬಾ ಹೇಳಿದರು.
ನರೇಂದ್ರ ಮೋದಿಯವರು ʼಬೇಟಿ ಬಚಾವೋʼ ಘೋಷಣೆಯನ್ನು ಮಾಡುತ್ತಲೇ ಇದ್ದಾರೆ. ಆದರೆ ಅವರು ಪ್ರಜ್ವಲ್ ರೇವಣ್ಣ ವಿಷಯದಲ್ಲಿ ತನ್ನ ಮೌನವನ್ನು ಮುರಿದಿಲ್ಲವೆಂದು ಹೇಳಿದರು. ವಿದೇಶಕ್ಕೆ ಪರಾರಿಯಾಗಿದ್ದ ಪ್ರಜ್ವಲ್ರೇವಣ್ಣನನ್ನು ಕರೆತರಲು ಕೇಂದ್ರದ ನೆರವ್ನ ಕೋರಿ ಮೋದಿಯವರಿಗೆ ಪತ್ರ ಬರೆದಿದ್ದರೂ, ಅವರಿಗೆ ಯಾವುದೇ ಉತ್ತರ ಬರಲಿಲ್ಲ. ಪ್ರಜ್ವಲ್ ರೇವಣ್ಣ ಪ್ರಕರಣದ ಬಗ್ಗೆ ಮೋದಿಯವರು ಎಷ್ಟು ಗಂಭೀರವಾಗಿದ್ದಾರೆಂಬುದನ್ನು ಇದು ಲಾಂಬಾ ವ್ಯಂಗ್ಯವಾಡಿದ್ದಾರೆ.
ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣದ ಸಂತ್ರಸ್ತರು ಹಾಗೂ ಸಾಕ್ಷಿಗಳ ಮೇಲೆ ಒತ್ತಡ ಹೇರುವ ಸಾಧ್ಯತೆ ಈಗಲೂ ಇದೆ ಎಂದರು. ಈ ಹಗರಣದ ಬಗ್ಗೆಪ್ರಧಾನಿಯವರು ತಮ್ಮ ಮೌನವನ್ನು ಮುರಿಯಬೇಕು ಹಾಗೂ ಪ್ರಕರಣದ ಯಾವುದೇ ಪುರಾವೆಗಳನ್ನು ತಿರುಚಲು ಬಿಡುವುದಿಲ್ಲ ಹಾಗೂ ನಮ್ಮ ಪುತ್ರಿಯರಿಗೆ ನ್ಯಾಯವನ್ನು ಖಾತರಿಪಡಿಸಲಾಗುವುದು ಎಂಬ ಭರವಸೆಯನ್ನು ಅವರು ನೀಡಬೇಕೆಂದು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಆಗ್ರಹಿಸಿದ್ದಾರೆ.
ಮಧ್ಯಪ್ರದೇಶದಲ್ಲಿ ದಲಿತ ಬಾಲಕಿಯೊಬ್ಬಳ ಮೇಲೆ ನಡೆದ ಅತ್ಯಾಚಾರ ಪ್ರಕರಣವನ್ನು ಉಲ್ಲೇಖಿಸಿದ ಅವರು, ಈ ಹೇಯ ಕೃತ್ಯವನ್ನು ಎಸಗಿದವರು ಬಿಜೆಪಿಯ ಮುಖಂಡರೆಂದು ಅವರು ಆಪಾದಿಸಿದರು.
ಈ ಪ್ರಕರಣದಲ್ಲಿ ಮೊದಲಿಗೆ ಸಂತ್ರಸ್ತೆಯ ಸೋದರನನ್ನು, ಆನಂತರ ಆಕೆಯ ಚಿಕ್ಕಪ್ಪನನ್ನು ಕೊಲ್ಲಲಾಯಿತು. ಆಕೆಯ ಚಿಕ್ಕಪ್ಪನ ಮೃತದೇಹವನ್ನು ಆ್ಯಂಬುಲೆನ್ಸ್ನಲ್ಲಿ ತರುತ್ತಿದ್ದಾಗ ಆಕೆ ಕೆಳಗೆ ಬಿದ್ದು ಸಾವನ್ನಪ್ಪಿದ್ದಳು ಎಂದವರು ಹೇಳಿದರು.
ಕಳೆದ ಐದು ತಿಂಗಳುಗಳಲ್ಲಿ 1644 ಬಾಲಕಿಯರು ಸೇರಿದಂತೆ ಮಹಿಳೆಯರ ಮೇಲಿನ ಅತ್ಯಾಚಾರ ಹಾಗೂ ಲೈಂಗಿಕ ಕಿರುಕುಳದ 12 ಸಾವಿರ ಪ್ರಕರಣಗಳು ವರದಿಯಾಗಿವೆಯೆಂದು ಅಲ್ಕಾ ತಿಳಿಸಿದ್ದಾರೆ.
ಮಧ್ಯಪ್ರದೇಶದಲ್ಲಿ ಸಿಧಿ ಎಂಬಲ್ಲಿ 25 ಬುಡಕಟ್ಟು ಮಹಿಳೆಯರು ಹಾಗೂ ವಿದ್ಯಾರ್ಥಿಗಳ ಮೇಲೆ ಅತ್ಯಾಚಾರವಾಗಿದೆ ಎಂದಾಕೆ ಆರೋಪಿಸಿದರು. ಕಳೆದ 10 ವರ್ಷಗಳಲ್ಲಿ ನಮ್ಮ ಪುತ್ರಿಯರಿಗೆ ನ್ಯಾಯವನ್ನು ಒದಗಿಸಲು ನರೇಂದ್ರ ಮೋದಿ ವಿಫಲರಾಗಿರುವುದು ದುರದೃಷ್ಟಕರವೆಂದು ಲಾಂಬಾ ಹೇಳಿದರು.