ಶವ್ವಾಲ್ ತಿಂಗಳ ಚಂದ್ರ ದರ್ಶನ, ದೇಶದಾದ್ಯಂತ ಸೋಮವಾರ ಈದ್ ಉಲ್ ಫಿತ್ರ್ ಆಚರಣೆ

photo Credit: PTI
ಹೊಸದಿಲ್ಲಿ: ರವಿವಾರ ಶವ್ವಾಲ್ ತಿಂಗಳ ಚಂದ್ರ ದರ್ಶನವಾದ್ದರಿಂದ ದೇಶದಾದ್ಯಂತ ಸೋಮವಾರ ಈದ್ ಉಲ್ ಫಿತ್ರ್ ಆಚರಣೆ ನಡೆಯಲಿದೆ.
ಪಿಟಿಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಫತೇಪುರಿ ಮಸೀದಿಯ ಇಮಾಮ್ ಮುಫ್ತಿ ಮುಕರ್ರಮ್ ಅಹ್ಮದ್ , ಮಸೀದಿಯ ರುಯೆತ್-ಎ-ಹಿಲಾಲ್ ಸಮಿತಿಯು ಶವ್ವಾಲ್ ತಿಂಗಳ ಚಂದ್ರದರ್ಶನವಾದ ಕುರಿತು ಖಚಿತಪಡಿಸಿಕೊಂಡಿದೆ. ಮಾರ್ಚ್ 31, ಸೋಮವಾರ ದೇಶದಲ್ಲಿ ಈದ್ ಆಚರಿಸಲಾಗುವುದು ಎಂದು ಹೇಳಿದರು.
ಈದ್ ಅನ್ನು ಸಹೋದರತ್ವ ಮತ್ತು ಸಾಮರಸ್ಯದ ಹಬ್ಬವೆಂದ ಅವರು, "ಈ ಸಂದರ್ಭದಲ್ಲಿ, ದೇಶದಲ್ಲಿ ಸಹೋದರತ್ವ ಮತ್ತು ಸಾಮರಸ್ಯವು ಮುಂದುವರಿಯಲಿ. ಪ್ರೀತಿಯು ಹೆಚ್ಚಲಿ ಎಂದು ನಾವು ಪ್ರಾರ್ಥಿಸುತ್ತೇವೆ" ಎಂದು ಹೇಳಿದರು.
Next Story