ಇನ್ನು ಸುಪ್ರೀಂ ಕೋರ್ಟ್ ನಲ್ಲಿ ಪ್ರಕರಣಗಳ ಬಗ್ಗೆ ವಾಟ್ಸ್ಆ್ಯಪ್ ನಲ್ಲಿ ಮಾಹಿತಿ
ಸುಪ್ರೀಂ ಕೋರ್ಟ್ (PTI)̧ , ವಾಟ್ಸ್ಆ್ಯಪ್ (ಸಾಂದರ್ಭಿಕ ಚಿತ್ರ)
)
ಹೊಸದಿಲ್ಲಿ : ಪ್ರಕರಣಗಳ ದಾಖಲಾತಿ ಮತ್ತು ವಿಚಾರಣಾ ದಿನಾಂಕಗಳ ಕುರಿತ ಮಾಹಿತಿಗಳನ್ನು ವಾಟ್ಸ್ಆ್ಯಪ್ ಸಂದೇಶಗಳ ಮೂಲಕ ವಕೀಲರಿಗೆ ತಿಳಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಡಿ.ವೈ. ಚಂದ್ರಚೂಡ್ ಗುರುವಾರ ತಿಳಿಸಿದ್ದಾರೆ.
‘‘ತನ್ನ 75ನೇ ವರ್ಷದಲ್ಲಿರುವ ಭಾರತೀಯ ಸುಪ್ರೀಂ ಕೋರ್ಟ್ ಸಣ್ಣ ಉಪಕ್ರಮವೊಂದನ್ನು ಆರಂಭಿಸಿದೆ. ಅದು ದೊಡ್ಡ ಪರಿಣಾಮವನ್ನು ಉಂಟು ಮಾಡುವ ಸಾಮರ್ಥ್ಯವನ್ನು ಹೊಂದಿದೆ. ನಮ್ಮ ದೈನಂದಿನ ಜೀವನದಲ್ಲಿ ವಾಟ್ಸ್ಆ್ಯಪ್ ಸಂದೇಶವು ಸರ್ವವ್ಯಾಪಿಯಾಗಿದೆ. ಅದು ಪ್ರಭಾವಿ ಸಂವಹನ ಸಾಧನವಾಗಿದೆ. ನ್ಯಾಯ ಪಡೆಯುವ ಹಕ್ಕನ್ನು ಬಲಪಡಿಸಲು ಮತ್ತು ನ್ಯಾಯಾಂಗ ವ್ಯವಸ್ಥೆಯಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸಲು ತನ್ನ ಮಾಹಿತಿ ತಂತ್ರಜ್ಞಾನ ಸೇವೆಗಳಿಗೆ ವಾಟ್ಸ್ಆ್ಯಪ್ ಸಂದೇಶ ಸೇವೆಗಳನ್ನು ಸೇರಿಸಿಕೊಳ್ಳಲಾಗಿದೆ ಎಂದು ಸುಪ್ರೀಂ ಕೋರ್ಟ್ ಘೋಷಿಸುತ್ತದೆ’’ ಎಂದು ಚಂದ್ರಚೂಡ್ ಹೇಳಿದರು.
Next Story