ಮುಖ್ತಾರ್ ಅನ್ಸಾರಿ ಸಾವು: ನ್ಯಾಯಾಂಗ ತನಿಖೆಗೆ ಉತ್ತರ ಪ್ರದೇಶ ನ್ಯಾಯಾಲಯ ಆದೇಶ
ಮುಖ್ತರ್ ಅನ್ಸಾರಿ | Photo: PTI
ಲಕ್ನ್ನೊ: ರಾಜಕಾರಣಿಯಾಗಿ ಬದಲಾಗಿದ್ದ ಭೂಗತ ಪಾತಕಿ ಮುಖ್ತರ್ ಅನ್ಸಾರಿ ಸಾವಿನ ಕುರಿತು ನ್ಯಾಯಾಂಗ ತನಿಖೆಗೆ ಉತ್ತರಪ್ರದೇಶ ಬಂದಾದ ಮುಖ್ಯ ನ್ಯಾಯಾಂಗ ದಂಡಾಧಿಕಾರಿ ಅವರ ನ್ಯಾಯಾಲಯ ಶುಕ್ರವಾರ ಆದೇಶ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ತನಿಖಾಧಿಕಾರಿಯಾಗಿ ಹೆಚ್ಚುವರಿ ಮುಖ್ಯ ನ್ಯಾಯಾಂಗ ದಂಡಾಧಿಕಾರಿ (ಎಂಪಿ-ಎಂಎಎಲ್ ನ್ಯಾಯಾಲಯ ಬಾಂಡಾ) ಗರಿಮಾ ಸಿಂಗ್ ಅವರನ್ನು ಬಂದಾ ಮುಖ್ಯ ನ್ಯಾಯಾಂಗ ದಂಡಾಧಿಕಾರಿ (ಸಿಜೆಎಂ) ಭಗವಾನ್ ದಾಸ್ ಗುಪ್ತಾ ಅವರು ನೇಮಕ ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಒಂದು ತಿಂಗಳ ಒಳಗೆ ವರದಿ ಸಲ್ಲಿಸುವಂತೆ ಮುಖ್ಯ ನ್ಯಾಯಾಂಗ ದಂಡಾಧಿಕಾರಿ ಅವರು ಆದೇಶ ನೀಡಿದ್ದಾರೆ.
63 ವರ್ಷದ ಅನ್ಸಾರಿ ಅವರನ್ನು ಪ್ರಜ್ಞಾ ಹೀನ ಸ್ಥಿತಿಯಲ್ಲಿ ಜಿಲ್ಲಾ ಕಾರಾಗೃಹದಿಂದ ಬಂದಾದಲ್ಲಿರುವ ರಾಣಿ ದುರ್ಗಾವತಿ ವೈದ್ಯಕೀಯ ಕಾಲೇಜಿಗೆ ಗುರುವಾರ ಸಂಜೆ ತರಲಾಗಿತ್ತು. ಅನಂತರ ಅವರು ಅಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದರು.
Next Story