ಕೇಂದ್ರದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ದೇಶ ವ್ಯಾಪಿ ಜಾತಿ ಗಣತಿ: ರಾಹುಲ್ ಗಾಂಧಿ
“ದೇಶಾದ್ಯಂತ ಅನ್ಯಾಯ ಚಾಲ್ತಿಯಲ್ಲಿದೆ”
ರಾಹುಲ್ ಗಾಂಧಿ | Photo: ANI
ಹೊಸದಿಲ್ಲಿ : ಮುಂದಿನ ಲೋಕಸಭೆ ಚುನಾವಣೆಯಲ್ಲಿ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ದೇಶಾದ್ಯಂತ ಜಾತಿ ಗಣತಿ ನಡೆಸಲಾಗುವುದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಪ್ರತಿಪಾದಿಸಿದ್ದಾರೆ.
ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ‘ಭಾರತ್ ಜೋಡೊ ನ್ಯಾಯ ಯಾತ್ರೆ’ಯ ಭಾಗವಾಗಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಆರೆಸ್ಸೆಸ್ ಹಾಗೂ ಬಿಜೆಪಿ ದ್ವೇಷ ಹಾಗೂ ಹಿಂಸಾಚಾರವನ್ನು ಪ್ರಚಾರ ಮಾಡುತ್ತಿದೆ ಎಂದು ಆರೋಪಿಸಿದರು.
‘‘ನಾವು ಸಾಮಾಜಿಕ ನ್ಯಾಯವನ್ನು ಬಯಸುತ್ತೇವೆ. ನಾವು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ, ದಲಿತರು ಹಾಗೂ ಇತರ ಹಿಂದುಳಿದ ವರ್ಗಕ್ಕೆ ಸೇರಿದ ಜನರ ಸಂಖ್ಯೆಯನ್ನು ತಿಳಿಯಲು ದೇಶ ವ್ಯಾಪಿ ಜಾತಿ ಗಣತಿ ನಡೆಸಲಿದ್ದೇವೆ’’ ಎಂದು ಅವರು ಹೇಳಿದ್ದಾರೆ.
‘‘ನ್ಯಾಯ ಎಂಬ ಪದವನ್ನು ಯಾತ್ರೆಗೆ ಲಗತ್ತಿಸಲಾಗಿದೆ. ಯಾಕೆಂದರೆ ದೇಶಾದ್ಯಂತ ಅನ್ಯಾಯ ಚಾಲ್ತಿಯಲ್ಲಿದೆ’’ ಎಂದು ರಾಹುಲ್ ಗಾಂಧಿ ಹೇಳಿದರು.
Next Story