ನಕ್ಸಲ್ ಪ್ರಕರಣ : ಆಂಧ್ರಪ್ರದೇಶ, ತೆಲಂಗಾಣದ 60 ಸ್ಥಳಗಳಲ್ಲಿ ಎನ್ಐಎ ದಾಳಿ
Photo: PTI
ಅಮರಾವತಿ : ನಕ್ಸಲ್ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಸೋಮವಾರ 60ಕ್ಕೂ ಅಧಿಕ ಸ್ಥಳಗಳಲ್ಲಿ ದಾಳಿ ನಡೆಸಿದೆ. ನಾಗರಿಕ ಹಕ್ಕುಗಳ ಅನುಕಂಪೆ, ನಕ್ಸಲರೊಂದಿಗೆ ನಿಕಟ ನಂಟು ಹೊಂದಿದವರೆಂದು ನಂಬಲಾದ ಹಲವರ ನಿವಾಸಗಳಿಗೆ ಎನ್ಐಎ ಈ ದಾಳಿ ನಡೆದಿದೆ.
“ನಕ್ಸಲ್ ಪ್ರಕರಣಕ್ಕೆ ಸಂಬಂಧಿಸಿ ಆಂಧ್ರಪ್ರದೇಶ ಹಾಗೂ ತೆಲಂಗಾಣದ ಒಟ್ಟು 60 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ’’ ಎಂದು ಎನ್ಐಎಯ ಉನ್ನತ ಮೂಲಗಳು ತಿಳಿಸಿವೆ. ತೆಲಂಗಾಣದ ಹೈದರಾಬಾದ್ ಹಾಗೂ ಆಂಧ್ರಪ್ರದೇಶದ ಗುಂಟೂರು, ನೆಲ್ಲೂರು, ತಿರುಪತಿ ಜಿಲ್ಲೆಗಳಲ್ಲಿ ಈ ದಾಳಿ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ದಾಳಿಯಲ್ಲಿ ರಾಜ್ಯ ಪೊಲೀಸರು ಎನ್ಐಎಗೆ ನೆರವು ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
Next Story