ಕನ್ನಡ ಸೇರಿದಂತೆ 11 ಭಾಷೆಗಳಲ್ಲಿ NCERT ಪಠ್ಯಪುಸ್ತಕಗಳು ಲಭ್ಯ
Photo | Needpix.com
ಹೊಸದಿಲ್ಲಿ: ಕನ್ನಡ ಮತ್ತು ತೆಲುಗು ಸೇರಿದಂತೆ 11 ಭಾಷೆಗಳಲ್ಲಿ NCERT ಪಠ್ಯಪುಸ್ತಕಗಳು ಲಭ್ಯವಿವೆ ಎಂದು ಕೇಂದ್ರದ ಸಹಾಯಕ ಶಿಕ್ಷಣ ಸಚಿವೆ ಅನ್ನಪೂರ್ಣಾ ದೇವಿ ಅವರು ಬುಧವಾರ ರಾಜ್ಯಸಭೆಯಲ್ಲಿ ತಿಳಿಸಿದರು.
ಜೊತೆಗೆ ‘ದೀಕ್ಷಾ’ಪೋರ್ಟಲ್ನಲ್ಲಿ 38 ಭಾಷೆಗಳಲ್ಲಿ ಇ-ಪಠ್ಯಪುಸ್ತಕಗಳು ಸೇರಿದಂತೆ ಇ-ಕಂಟೆಂಟ್ ಲಭ್ಯವಿದೆ ಎಂದೂ ಅವರು ಲಿಖಿತ ಉತ್ತರದಲ್ಲಿ ತಿಳಿಸಿದರು.
ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) 2020ರ ಅನುಸರಣೆಯಾಗಿ 1 ಮತ್ತು 2ನೇ ಗ್ರೇಡ್ಗಳಿಗಾಗಿ ಗಣಿತ ಪಠ್ಯಪುಸ್ತಕವನ್ನೂ 18 ಭಾಷೆಗಳಲ್ಲಿ ಲಭ್ಯವಾಗಿಸಲಾಗಿದೆ ಎಂದರು.
Next Story