ಇಂದಿನ ಎನ್ಡಿಎ, ಹಿಂದಿನ ಯುಪಿಎ ಸರ್ಕಾರಗಳಿಂದ ಯುವಕರಿಗೆ ಉದ್ಯೋಗ ಸೃಷ್ಟಿಯಾಗಿಲ್ಲ : ಸಂಸತ್ತಿನಲ್ಲಿ ರಾಹುಲ್ ಗಾಂಧಿ ಹೇಳಿಕೆ

Photo credit: X/@ANI
ಹೊಸದಿಲ್ಲಿ: "ಹಿಂದಿನ ಯುಪಿಎ ಸರ್ಕಾರವಾಗಲಿ ಅಥವಾ ಇಂದಿನ ಎನ್ಡಿಎ ಸರ್ಕಾರವಾಗಲಿ ಈ ದೇಶದ ಯುವಕರಿಗೆ ಉದ್ಯೋಗದ ಬಗ್ಗೆ ಸ್ಪಷ್ಟ ಉತ್ತರವನ್ನು ನೀಡಿಲ್ಲ" ಎಂದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದರು.
ಸೋಮವಾರ ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯ ಸಲ್ಲಿಸುವ ವೇಳೆ ಅವರು ಮಾತನಾಡಿದರು. " ನಾವು ವೇಗವಾಗಿಯೋ, ಸ್ವಲ್ಪ ನಿಧಾನವಾಗಿಯೋ ಬೆಳೆಯುತ್ತಿದ್ದೇವೆ. ನಾವು ಎದುರಿಸುತ್ತಿರುವ ಸಾರ್ವತ್ರಿಕ ಸಮಸ್ಯೆಯೆಂದರೆ ನಾವು ನಿರುದ್ಯೋಗ ಸಮಸ್ಯೆಯನ್ನು ನಿಭಾಯಿಸಲು ಸಾಧ್ಯವಾಗದಿರುವುದು" ಎಂದು ಅವರು ತಮ್ಮ ಬಜೆಟ್ ಭಾಷಣದಲ್ಲಿ ಹೇಳಿದರು.
ದೇಶದ ಯುವಜನರ ಸಮಸ್ಯೆಗಳನ್ನು ಎತ್ತಿ ತೋರಿಸುವ ಪ್ರಯತ್ನವನ್ನು ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ ಮಾಡಿದರು.
Next Story