ಚುನಾವಣಾ ಆಯುಕ್ತರ ನೇಮಕಕ್ಕೆ ನೂತನ ಮಸೂದೆ: ರಾಜ್ಯಸಭೆಯಲ್ಲಿ ಒಪ್ಪಿಗೆ
ರಾಜ್ಯ ಸಭೆ | Photo: PTI
ಹೊಸದಿಲ್ಲಿ: ಮುಖ್ಯ ಚುನಾವಣಾ ಆಯುಕ್ತ ಹಾಗೂ ಚುನಾವಣಾ ಆಯುಕ್ತರ ನೇಮಕಾತಿ ಹಾಗೂ ಸೇವಾ ನಿಯಮಗಳ ಕುರಿತ ಮಸೂದೆಯನ್ನು ರಾಜ್ಯ ಸಭೆ ಮಂಗಳವಾರ ಅಂಗೀಕರಿಸಿತು.
ಮುಖ್ಯ ಚುನಾವಣಾ ಆಯುಕ್ತ ಹಾಗೂ ಇತರ ಚುನಾವಣಾ ಆಯುಕ್ತರ (ನೇಮಕಾತಿ, ಸೇವಾ ನಿಯಮ ಹಾಗೂ ಅಧಿಕಾರಾವಧಿ) ಮಸೂದೆಗೆ ಮೇಲ್ಮನೆಯಲ್ಲಿ ಧ್ವನಿ ಮತದ ಒಪ್ಪಿಗೆ ಲಭಿಸಿತು.
ಚುನಾವಣಾ ಆಯುಕ್ತರ ನೇಮಕಾತಿಗೆ ಪ್ರಧಾನಿ (ಅಧ್ಯಕ್ಷ), ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕ ಹಾಗೂ ಪ್ರಧಾನಿ ನಾಮನಿರ್ದೇಶಿಸುವ ಕೇಂದ್ರ ಸಂಪುಟದ ಸಚಿವನನ್ನು ಒಳಗೊಂಡ ಚುನಾವಣಾ ಆಯುಕ್ತರ ನೇಮಕಾತಿಗೆ ಆಯ್ಕೆ ಸಮಿತಿಯನ್ನು ರೂಪಿಸುವ ಉದ್ದೇಶವನ್ನು ಈ ಮಸೂದೆ ಹೊಂದಿದೆ.
ರಾಜ್ಯ ಸಭೆಯಲ್ಲಿ ಮಂಗಳವಾರ ಮಸೂದೆ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಕಾನೂನು ಸಚಿವ ಅರ್ಜುನ್ ರಾಮ್ ಮಘಾವಾಲ್, ಈ ಹಿಂದಿನ ಮಸೂದೆಯಲ್ಲಿ ಕೆಲವು ಲೋಪದೋಷಗಳು ಇದ್ದುದರಿಂದ ಹೊಸ ಮಸೂದೆ ಮಂಡಿಸಲಾಗಿದೆ ಎಂದರು.
Next Story