ನ್ಯೂಸ್ ಕ್ಲಿಕ್ ಪ್ರಕರಣ : ಅಮೆರಿಕದ ಕೋಟ್ಯಾಧಿಪತಿ ನೆವಿಲ್ಲೆ ರಾಯ್ ಸಿಂಘಂಗೆ ಈಡಿಯಿಂದ ಹೊಸ ಸಮನ್ಸ್
ನೆವಿಲ್ಲೆ ರಾಯ್ ಸಿಂಘಂ | Photo: NDTV
ಹೊಸದಿಲ್ಲಿ: ‘ನ್ಯೂಸ್ ಕ್ಲಿಕ್’ ಪ್ರಕರಣಕ್ಕೆ ಸಂಬಂಧಿಸಿ ಶಾಂಘೈ ಮೂಲದ ಕೋಟ್ಯಧಿಪತಿ ನೆವಿಲ್ಲೆ ರಾಯ್ ಸಿಂಘಂ ಅವರಿಗೆ ಜಾರಿ ನಿರ್ದೇಶನಾಲಯ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮೂಲಕ ನೋಟಿಸು ಜಾರಿ ಮಾಡಿದೆ.
ತನ್ನ ವಿರುದ್ಧದ ಎಲ್ಲಾ ಆರೋಪಗಳನ್ನು ಸಿಂಘಂ ಅವರು ನಿರಾಕರಿಸಿದ್ದಾರೆ. ಸಿಂಘಂ ವಿದೇಶಿ ವಿನಿಮಯ ದೇಣಿಗೆ (ನಿಯಂತ್ರಣ) ಕಾಯ್ದೆ (ಎಫ್ಸಿಆರ್ಎ) ಉಲ್ಲಂಘನೆ ಆರೋಪಿಸಿ ಸಿಬಿಐ ದಾಖಲಿಸಿದ ಪ್ರಕರಣದಲ್ಲೂ ಆರೋಪಿಯಾಗಿದ್ದಾರೆ.
ಆರೋಪಿಗಳೆಂದು ಉಲ್ಲೇಖಿಸಲಾದ ಇತರರೆಂದರೆ, ಪಿಪಿಕೆ ನ್ಯೂಸ್ ಕ್ಲಿಕ್ ಸ್ಟುಡಿಯೊ ಪ್ರೈವೇಟ್ ಲಿಮಿಟೆಡ್, ಅದರ ನಿರ್ದೇಶಕ ಪ್ರಬೀರ್ ಪುರಕಾಯಸ್ಥ ಹಾಗೂ ಅಮೆರಿಕ ಮೂಲದ ವರ್ಲ್ಡ್ವೈಡ್ ಮೀಡಿಯಾ ಹೋಲ್ಡಿಂಗ್ಸ್ ಎಲ್ಎಲ್ಸಿಯ ಆಗಿನ ಮ್ಯಾನೇಜರ್ ಜೇಸನ್ ಪಿಫೆಚ್ಚರ್.
ಈ ಹಿಂದೆ ಪುರಕಾಯಸ್ಥ ಹಾಗೂ ವೆಬ್ ಸೈಟ್ನ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಅಮಿತ್ ಚಕ್ರವರ್ತಿಯನ್ನು ದಿಲ್ಲಿ ಪೊಲೀಸರು ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ (ಯುಎಪಿಎ) ಅಡಿ ಬಂಧಿಸಿದ್ದರು ಹಾಗೂ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದರು.