ದಿಲ್ಲಿ, ಹರ್ಯಾಣ, ಪಂಜಾಬ್ ನ 12 ಸ್ಥಳಗಳಲ್ಲಿ ಎನ್ಐಎ ದಾಳಿ
ಭಯೋತ್ಪಾದಕರು, ಭೂಗತಪಾತಕಿಗಳ ಪ್ರಕರಣ
Photo: PTI
ಹೊಸದಿಲ್ಲಿ : ಭಯೋತ್ಪಾದಕರು-ಭೂಗತಪಾತಕಿಗಳು-ಮಾದಕ ವಸ್ತು ಕಳ್ಳ ಸಾಗಾಟಗಾರರ ಜಾಲವನ್ನು ಬೇಧಿಸಲು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಗುರುವಾರ ದಿಲ್ಲಿ, ಹರ್ಯಾಣ ಹಾಗೂ ಪಂಜಾಬ್ ಸೇರಿದಂತೆ 32 ಸ್ಥಳಗಳಲ್ಲಿ ದಾಳಿ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯ ಪೊಲೀಸ್ ಪಡೆಯ ಸಮನ್ವಯದೊಂದಿಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ)ಯ ಹಲವು ತಂಡಗಳು ಇಂದು ಬೆಳಗ್ಗೆ ದಾಳಿ ಆರಂಭಿಸಿತು. ಎನ್ಐಎ ದಾಳಿ ನಡೆಸಿದ ಸ್ಥಳಗಳಲ್ಲಿ ಹರ್ಯಾಣದ ಝಜ್ಜಾರ್ ಹಾಗೂ ಸೋನಿಪತ್ ಕೂಡ ಸೇರಿದೆ.
ಎನ್ಐಎ ಅಧಿಕಾರಿಗಳು ಭೂಗತ ಪಾತಕಿ ಲಾರೆನ್ಸ್ ಬಿಷ್ಣೋಯಿಯ ಸಂಘಟಿತ ಭಯೋತ್ಪಾದನೆ-ಅಪರಾಧ ತಂಡದ ಸದಸ್ಯರಿಗೆ ಸೇರಿದ ಸ್ಥಳಗಳಿಗೆ ಜನವರಿ 9ರಂದು ದಾಳಿ ನಡೆಸಿದ್ದರು. ಲಾರೆನ್ಸ್ ಬಿಷ್ಣೋಯಿಗೆ ಸೇರಿದ 4 ಸೊತ್ತುಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದರು. ಇದಾದ ಕೆಲವು ದಿನಗಳ ಬಳಿಕ ಈ ದಾಳಿ ನಡೆದಿದೆ.
Next Story