ಸ್ವಾತಂತ್ರ್ಯ ದೊರಕಿದಾಗಿನಿಂದ ನಡೆದ ಜನಗಣತಿ ವೇಳೆ ಜಾತಿ ಗಣತಿ ನಡೆದಿಲ್ಲ: ಕೇಂದ್ರ
ಸಾಂದರ್ಭಿಕ ಚಿತ್ರ | Photo: PTI
ಹೊಸದಿಲ್ಲಿ : ದೇಶಕ್ಕೆ ಸ್ವಾತಂತ್ರ್ಯ ದೊರಕಿದಂದಿನಿಂದ ಜನಗಣತಿ ವೇಳೆ ಪರಿಶಿಷ್ಟ ಜಾತಿ, ವರ್ಗಗಳ ಗಣತಿಯನ್ನು ಹೊರತುಪಡಿಸಿ ಜಾತಿವಾರು ಗಣತಿ ನಡೆದಿಲ್ಲ ಎಂದು ಲೋಕಸಭೆಗೆ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಈ ಕುರಿತು ಕೇಂದ್ರ ಗೃಹ ರಾಜ್ಯ ಸಚಿವ ನಿತ್ಯಾನಂದ ರೇ ಲೋಕಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಸಂವಿಧಾನದ ಆದೇಶ 1950 ಅಡಿಯಲ್ಲಿ ಪರಿಶಿಷ್ಟ ಜಾತಿ, ಪಂಗಡ ಎಂದು ನಿರ್ದಿಷ್ಟವಾಗಿ ಅಧಿಸೂಚಿತಗೊಂಡ ಜಾತಿ ಮತ್ತು ಪಂಗಡಗಳ ಗಣತಿ ನಡೆಯುತ್ತದೆ ಎಂದು ಅವರು ಹೇಳಿದರು. ಮುಂದಿನ ಜನಗಣತಿ ವೇಳೆ ಜಾತಿ ಗಣತಿ ಕೂಡ ನಡೆಯಬೇಕೆಂದು ವಿವಿಧ ರಾಜಕೀಯ ಪಕ್ಷಗಳ ಬೇಡಿಕೆ ಕುರಿತು ಮಾತನಾಡಿದ ಸಚಿವ ಈ ರೀತಿಯ ಬೇಡಿಕೆಯಿದೆ ಎಂದಷ್ಟೇ ಹೇಳಿದರು.
ವಿಪಕ್ಷಗಳು ಜಾತಿ ಗಣತಿಗೆ ಬಹಳ ಸಮಯದಿಂದ ಆಗ್ರಹಿಸುತ್ತಿದ್ದರೂ ಸರ್ಕಾರ ಮಾತ್ರ ರಾಷ್ಟ್ರೀಯ ಜನಗಣತಿ ವೇಳೆ ಜಾತಿ ಗಣತಿಯನ್ನೂ ನಡೆಸುವುದು ಆಡಳಿತಾತ್ಮಕ, ಕಾನೂನಾತ್ಮಕವಾಗಿ ಹಾಗೂ ತಾಂತ್ರಿಕವಾಗಿ ಸವಾಲಿನ ಕೆಲಸವಾಗಿದೆ ಎಂದು ಹೇಳುತ್ತಾ ಬಂದಿದೆ.
Next Story