"ರಾಜಕೀಯ ಬೇಡ": ದಿಲ್ಲಿಗೆ ಹೆಚ್ಚುವರಿಯಾಗಿ 137 ಕ್ಯೂಸೆಕ್ಸ್ ನೀರು ಹರಿಸುವಂತೆ ಹರ್ಯಾಣ ಸರಕಾರಕ್ಕೆ ಸುಪ್ರೀಂಕೋರ್ಟ್ ಆದೇಶ
ಸುಪ್ರೀಂಕೋರ್ಟ್ | PC : PTI
ಹೊಸದಿಲ್ಲಿ: ತೀವ್ರ ನೀರಿನ ಕೊರತೆಯನ್ನು ಎದುರಿಸುತ್ತಿರುವ ರಾಷ್ಟ್ರ ರಾಜಧಾನಿ ದಿಲ್ಲಿಗೆ ಯಾವುದೇ ರಾಜಕೀಯ ಮಾಡದೆ ಹೆಚ್ಚುವರಿಯಾಗಿ 137 ಕ್ಯೂಸೆಕ್ಸ್ ನೀರು ಹರಿಸುವಂತೆ ಹರ್ಯಾಣ ಸರಕಾರಕ್ಕೆ ಸುಪ್ರೀಂಕೋರ್ಟ್ ಆದೇಶಿಸಿದೆ. ಇದರಿಂದಾಗಿ ದಿಲ್ಲಿಯು ಹಿಮಾಚಲ ಪ್ರದೇಶದಿಂದ ಹೆಚ್ಚುವರಿ ನೀರು ಪಡೆಯಲಿದೆ.
ದಿಲ್ಲಿ ಸರಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಪ್ರಶಾಂತ್ ಕೆ. ಮಿಶ್ರಾ ಹಾಗೂ ನ್ಯಾ. ಕೆ.ವಿ.ವಿಶ್ವನಾಥನ್ ಅವರನ್ನೊಳಗೊಂಡ ನ್ಯಾಯಪೀಠವು, ಈ ಹೆಚ್ಚುವರಿ ನೀರನ್ನು ಅಳತೆ ಮಾಡಲು ಹಾಗೂ ವಿಭಜಿಸಲು ತನ್ನ ಬಳಿ ಯಾವುದೇ ತಾಂತ್ರಿಕತೆ ಇಲ್ಲ ಎಂಬ ಹರ್ಯಾಣ ಸರಕಾರದ ವಾದವನ್ನು ತಳ್ಳಿ ಹಾಕಿತು.
ಇದೇ ವೇಳೆ, ಈ ಸಂದರ್ಭದಲ್ಲಿ ಯಾವುದೇ ರೀತಿಯಲ್ಲಿ ನೀರಿನ ಪೋಲಾಗಬಾರದು ಎಂದೂ ಸುಪ್ರೀಂಕೋರ್ಟ್ ತಾಕೀತು ಮಾಡಿದೆ. ಮರು ವಿಚಾರಣೆ ನಡೆಯಲಿರುವ ಸೋಮವಾರದಂದು ವಸ್ತು ಸತಿ ವರದಿಯನ್ನು ಸಲ್ಲಿಸುವಂತೆಯೂ ನ್ಯಾಯಾಲಯ ಸೂಚಿಸಿದೆ.
Next Story