ಭೌತಶಾಸ್ತ್ರ ವಿಭಾಗದಲ್ಲಿ ಜಾನ್ ಹಾಪ್ಫೀಲ್ಡ್, ಜೆಫ್ರಿ ಹಿಂಟನ್ ಗೆ ನೊಬೆಲ್ ಪ್ರಶಸ್ತಿ
Image Credit: X/@NobelPrize
ಹೊಸದಿಲ್ಲಿ: 2024ರ ಸಾಲಿನ ಭೌತಶಾಸ್ತ್ರ ವಿಭಾಗದ ನೊಬೆಲ್ ಪ್ರಶಸ್ತಿಗೆ ವಿಜ್ಞಾನಿಗಳಾದ ಜಾನ್ ಜೆ. ಹಾಪ್ಫೀಲ್ಡ್ ಮತ್ತು ಜೆಫ್ರಿ ಹಿಂಟನ್ ಅವರನ್ನು ಆಯ್ಕೆ ಮಾಡಲಾಗಿದೆ.
ಆರ್ಟಿಫಿಶಿಯಲ್ ನ್ಯೂರಲ್ ನೆಟ್ವರ್ಕ್ ಗಳ ಕುರಿತ ಸಂಶೋಧನೆಗಾಗಿ ಜಾನ್ ಜೆ. ಹಾಪ್ಫೀಲ್ಡ್ ಮತ್ತು ಜೆಫ್ರಿ ಹಿಂಟನ್ ಅವರಿಗೆ ಭೌತಶಾಸ್ತ್ರ ವಿಭಾಗದಲ್ಲಿ ನೊಬೆಲ್ ಬಹುಮಾನ ನೀಡಲಾಗಿದೆ.
ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ ಮಂಗಳವಾರ 2024ರ ಸಾಲಿನ ಭೌತಶಾಸ್ತ್ರ ವಿಭಾಗದ ನೊಬೆಲ್ ಪ್ರಶಸ್ತಿ ಬಗ್ಗೆ ಘೋಷಣೆ ಮಾಡಿದೆ.
Next Story