ನೋಯ್ಡಾ | ಶಾಲೆಯಲ್ಲಿ 3 ವರ್ಷದ ಮಗುವಿನ ಮೇಲೆ ಅತ್ಯಾಚಾರ, ಶುಚಿತ್ವ ಸಿಬ್ಬಂದಿಯ ಬಂಧನ
ಸಾಂದರ್ಭಿಕ ಚಿತ್ರ
ನೋಯ್ಡಾ: ಕಳೆದ ವಾರ ನೋಯ್ಡಾದ ಖಾಸಗಿ ಶಾಲೆಯ ಆವರಣದಲ್ಲಿ ನರ್ಸರಿ ವಿಭಾಗದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಶುಚಿತ್ವ ಮಾಡುವ ಸಿಬ್ಬಂದಿಯನ್ನು ಬಂಧಿಸಲಾಗಿದೆ.
ಕೆಲವು ತಿಂಗಳ ಹಿಂದೆ ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡಿದ್ದ ನಿಥಾರಿ ನಿವಾಸಿ, ಅಕ್ಟೋಬರ್ 9 ರಂದು ಮೂರು ವರ್ಷದ ಮಗುವನ್ನು ಶಾಲೆಯ ಸಿಸಿಟಿವಿ ವ್ಯಾಪ್ತಿಯಿಂದ ಹೊರಗಿರುವ ಪ್ರದೇಶಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆ ದಿನ ಶಾಲೆಯಿಂದ ಹಿಂತಿರುಗಿದ ನಂತರ ಮಗು ಸುಮ್ಮನಿರುವುದನ್ನು ಆಕೆಯ ಪೋಷಕರು ಗಮನಿಸಿದ್ದಾರೆ. ಮಗುವನ್ನು ವೈದ್ಯರ ಬಳಿಗೆ ಕರೆದೊಯ್ದಾಗ ಹೊಟ್ಟೆಯ ಕೆಳಭಾಗದಲ್ಲಿ ತೀವ್ರವಾದ ನೋವಿರುವುದು ಕಂಡು ಬಂದಿದೆ. ಕೂಡಲೇ ಮಗುವಿನ ಪೋಷಕರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.
ಅ.10 ರಂದು ಸೆಕ್ಟರ್ 20 ಪೊಲೀಸ್ ಠಾಣೆಯಲ್ಲಿ ಸಲ್ಲಿಸಿದ ದೂರಿನಲ್ಲಿ, ಮಗುವನ್ನು ಪರೀಕ್ಷಿಸಿದ ವೈದ್ಯರು, ಆಕೆಯ ಖಾಸಗಿ ಅಂಗಗಳ ಮೇಲೆ ಬಲ ಪ್ರಯೋಗದಿಂದ ಗಾಯಗಳ ಬಗ್ಗೆ ಗಾಯಗಳಾಗಿವೆ. ಆಕೆಗೆ ಕಿರುಕುಳ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ನಂತರ ಮಗುವಿನೊಂದಿಗೆ ಕುಳಿತು ಪೋಷಕರು ಸಮಾಲೋಚಿಸಿದಾಗ ಮಗು ಘಟನೆಯ ಬಗ್ಗೆ ತಿಳಿಸಿದೆ. ಶಾಲೆಯಲ್ಲಿ ಪ್ಲೇಟ್ಗಳನ್ನು ಶುಚಿ ಮಾಡುವ ವ್ಯಕ್ತಿಯೊಬ್ಬ ತನ್ನ ಖಾಸಗಿ ಭಾಗಗಳಿಗೆ ಚುಚ್ಚಿದ್ದಾನೆ. ಇದರಿಂದ ನೋವಾಗುತ್ತಿದೆ ಎಂದು ಮಗು ಹೇಳಿಕೊಂಡಿದೆ.
ಘಟನೆಯ ನಂತರದ ಮಗು ಶಾಲೆಗೆ ಹೋಗಲು ನಿರಾಕರಿಸುತ್ತಿದೆ ಎಂದು ಆಕೆಯ ಪೋಷಕರು ತಿಳಿಸಿದ್ದಾರೆ.
ಆರೋಪಿಯು ಶಾಲೆಯ ಶುಚಿತ್ವ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾನೆ. BNS ಸೆಕ್ಷನ್ 65 (2) (ಅತ್ಯಾಚಾರ) ಮತ್ತು ಪೊಕ್ಸೊ ಕಾಯ್ದೆಯ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ನೋಯ್ಡಾ ಡಿಸಿಪಿ ರಾಮ್ ಬದನ್ ಸಿಂಗ್ ಹೇಳಿದರು.
ಅಕ್ಟೋಬರ್ 10 ರಂದು ಆರೋಪಿಯನ್ನು ಬಂಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಯ ಆಡಳಿತ ಮಂಡಳಿಯನ್ನು ಕೂಡ ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.