ವಾರಣಾಸಿಯಿಂದ ನಾಮಪತ್ರ ಸಲ್ಲಿಕೆಗೆ ಮತ್ತೆ ತಡೆ: ಕಾಮಿಡಿಯನ್ ಶ್ಯಾಮ್ ರಂಗೀಲಾ ಆರೋಪ
ಶ್ಯಾಮ್ ರಂಗೀಲಾ | PC : X \ @ShyamRangeela
ವಾರಣಾಸಿ: ವಾರಣಾಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಣಕ್ಕಿಳಿಯಲು ಬಯಸಿದ್ದ ಖ್ಯಾತ ಕಾಮಿಡಿಯನ್ ಶ್ಯಾಮ್ ರಂಗೀಲಾ ಅವರನ್ನು ನಾಮಪತ್ರ ಸಲ್ಲಿಸುವುದರಿಂದ ಮತ್ತೊಮ್ಮೆ ತಡೆಯಲಾಗಿದೆ.
ಈ ಕುರಿತು ಶ್ಯಾಮ್ ರಂಗೀಲಾ ಎಕ್ಸ್ನಲ್ಲಿ ಹಿಂದಿಯಲ್ಲಿ ಪೋಸ್ಟ್ ಮಾಡಿದ್ದಾರೆ. ತಾನು ವಾರಣಾಸಿ ಚುನಾವಣಾ ಆಯೋಗದ ಕಚೇರಿಯನ್ನು ಮೇ 14ರಂದು ಬೆಳಿಗ್ಗೆ 9.15ಕ್ಕೆ ತಲುಪಿದ್ದಾಗಿ ಅವರು ಹೇಳಿಕೊಂಡಿದ್ದಾರೆ. ಎಲ್ಲಿಂದಲೂ ಉತ್ತರ ಬರುತ್ತಿಲ್ಲ ನಾಮಪತ್ರ ಸಲ್ಲಿಸಲು ಸಾಧ್ಯವಾಗುವುದಾಗಿ ಆಶಿಸುವುದಾಗಿ ಅವರು ಬರೆದಿದ್ದಾರೆ.
ಇನ್ನೊಂದು ಟ್ವೀಟ್ನಲ್ಲಿ ಅವರು ಚುನಾವಣಾ ಆಯೋಗವನ್ನು ಟ್ಯಾಗ್ ಮಾಡಿ ಪ್ರತಿಕ್ರಿಯಿಸುವಂತೆ ಕೋರಿದ್ದಾರೆ. ನಾನು ಇಮೇಲ್ ಮಾಡಿ, ಕರೆ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಅವರು ಹೇಳಿದ್ದಾರೆ.
ನಾಮಪತ್ರ ಸಲ್ಲಿಕೆ ಪ್ರಕ್ರಿಯೆಗೆ ತಡೆಯುಂಟು ಮಾಡುತ್ತಿರುವ ಬಗ್ಗೆ ಈ ಹಿಂದೆ ಕೂಡ ಶ್ಯಾಮ್ ರಂಗೀಲಾ ವೀಡಿಯೋ ಹೇಳಿಕೆ ಮೂಲಕ ದೂರಿದ್ದರು.
ಮೇ 10 ಹಾಗೂ 13ರಂದು ಬೆಳಿಗ್ಗೆಯಿಂದ ಕಾದರೂ ನಾಮಪತ್ರ ಅರ್ಜಿಗಳನ್ನು ಹಲವು ಮಂದಿಗೆ ನಿರಾಕರಿಸಲಾಗಿದೆ ಎಂದು ಅವರು ಹೇಳಿದ್ದಾರೆ.
वाराणसी चुनाव आयोग कार्यालय
— Shyam Rangeela (@ShyamRangeela) May 14, 2024
14 मई, सुबह 9:15 बजे लगभग पहुँच गये है,
कहीं से कोई जवाब नहीं आ रहा,
लेकिन नामांकन की उम्मीद अभी भी नहीं छोड़ी है हमने pic.twitter.com/MfirxtfNZk
ಪ್ರಜಾಪ್ರಭುತ್ವವನ್ನು ದಮನಿಸಲಾಗುತ್ತಿದೆ ಹಾಗೂ ಮೋದಿ ಅವರು ಅವಿರೋಧವಾಗಿ ಆಯ್ಕೆಯಾಗಬೇಕೆಂದು ಈ ರೀತಿ ಮಾಡಲಾಗುತ್ತಿದೆ ಎಂದು ಹೇಳಿರುವ ಅವರು ತಾನು ಚುನಾವಣೆ ಸ್ಪರ್ಧಿಸುವ ಬಗ್ಗೆ ದೃಢ ನಿರ್ಧಾರ ಹೊಂದಿರುವುದಾಗಿ ತಿಳಿಸಿದರು. ಎಲ್ಲಾ ಪ್ರಕ್ರಿಯೆ ಪೂರ್ಣಗೊಳಿಸಿದರೂ ತಮಗೆ ಪ್ರವೇಶ ನಿರಾಕರಿಸಲಾಗಿದೆ ಎಂದು ಅವರು ಹೇಳಿದರು.