ಪತಂಜಲಿ ಮಾತ್ರವಲ್ಲ, ಗ್ರಾಹಕರ ಆರೋಗ್ಯಕ್ಕೆ ಅಪಾಯವೊಡ್ಡುವ ಉತ್ಪನ್ನಗಳನ್ನು ಹೊಂದಿದ ಇತರ ಎಫ್‌ಎಂಸಿಜಿಗಳ ಬಗ್ಗೆಯೂ ಕಳವಳವಿದೆ: ಸುಪ್ರೀಂ ಕೋರ್ಟ್
Not concerned just about Patanjali, but about all firms deceiving customers, says Supreme Court
ಹೊಸದಿಲ್ಲಿ: ಪತಂಜಲಿ ಮಾತ್ರವಲ್ಲದೆ ಗ್ರಾಹಕರನ್ನು ವಂಚಿಸುವ ಮತ್ತು ಆರೋಗ್ಯಕ್ಕೆ ಅಪಾಯವೊಡ್ಡುವ ಉತ್ಪನ್ನಗಳನ್ನು ಮಾರಾಟ ಮಾಡುವ ಇತರ ಫಾಸ್ಟ್ ಮೂವಿಂಗ್ ಕನ್ಸ್ಯೂಮರ್ ಗುಡ್ಸ್ (ಎಫ್‌ಎಂಸಿಜಿ) ಕಂಪನಿಗಳ ಬಗ್ಗೆಯೂ ತನಗೆ ಕಳವಳವಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಪತಂಜಲಿ ಸಂಸ್ಥೆಯು ಪ್ರಕಟಿಸಿದ ದಾರಿ ತಪ್ಪಿಸುವಂತಹ ಜಾಹೀರಾತು ಸಂಬಂಧಿತ ಪ್ರಕರಣದ ವಿಚಾರಣೆಯ ವೇಳೆ ನ್ಯಾಯಾಲಯ ಮೇಲಿನಂತೆ ಹೇಳಿದೆ.
“ನಮಗೆ ಪತಂಜಲಿ ಬಗ್ಗೆ ಮಾತ್ರ ಕಳವಳವಿಲ್ಲ, ಬದಲು ಗ್ರಾಹಕರನ್ನು ಸುಂದರ ಚಿತ್ರಣಗಳೊಂದಿಗೆ ಆಕರ್ಷಿಸಿ ತಪ್ಪು ದಾರಿಗೆಳೆಯುವ ಇತರ ಎಫ್‌ಎಂಸಿಜಿಗಳ ಬಗ್ಗೆಯೂ ಕಳವಳವಿದೆ ಎಂದು ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರ ಪೀಠ ಹೇಳಿದೆ.
ದೊಡ್ಡ ಮೊತ್ತ ಪಾವತಿಸಿ ಇಂತಹ ಉತ್ಪನ್ನಗಳನ್ನು ಖರೀದಿಸಿ ಕೊನೆಗೆ ಬಾಧಿತರಾಗುವ ಗ್ರಾಹಕರ ಬಗ್ಗೆ ಕಳವಳವಿದೆ. ಈ ರೀತಿ ಕಂಪೆನಿಗಳು ಮಾಡುವುದು ಅಸ್ವೀಕಾರಾರ್ಹ ಎಂದು ನ್ಯಾಯಾಲಯ ಹೇಳಿದೆ.
Next Story