ಕೆನಡಾ ಪ್ರಜೆಗಳ ವೀಸಾ ಅರ್ಜಿಗಳ ಅಮಾನತು ನೋಟಿಸ್ ಹಿಂಪಡೆದ ಭಾರತದ ಖಾಸಗಿ ಏಜೆನ್ಸಿ
ಸಾಂದರ್ಭಿಕ ಚಿತ್ರ (Credit: freepik)
ಹೊಸದಿಲ್ಲಿ: ಕೆನಡಿಯನ್ನರ ವೀಸಾ ಅರ್ಜಿಗಳ ಆರಂಭಿಕ ಪರಿಶೀಲನೆಯನ್ನು ನಡೆಸಲು ಭಾರತದಿಂದ ನೇಮಕಗೊಂಡಿರುವ ಖಾಸಗಿ ಸಂಸ್ಥೆ ಗುರುವಾರ ವೀಸಾ ಸೇವೆಗಳನ್ನು ಅಮಾನತುಗೊಳಿಸಿದ ಬಗ್ಗೆ ತನ್ನ ವೆಬ್ಸೈಟ್ ನಲ್ಲಿ ನೋಟಿಸ್ ಹಾಕಿತು ಆದರೆ ಗಂಟೆಗಳ ನಂತರ ಅದನ್ನು ಹಿಂತೆಗೆದುಕೊಂಡಿದೆ ಎಂದು ವರದಿಯಾಗಿದೆ.
ಭಾರತೀಯ ವೀಸಾ ಸೇವೆಗಳನ್ನು "ಮುಂದಿನ ಸೂಚನೆ ತನಕ ಅಮಾನತುಗೊಳಿಸಲಾಗಿದೆ" ಎಂಬ ನೋಟಿಸ್ ಅನ್ನು ಸಂಸ್ಥೆ ಪ್ರಕಟಿಸಿದೆ. ಆದಾಗ್ಯೂ, ನಂತರ ನೋಟಿಸನ್ನು ಹಿಂಪಡೆಯಲಾಯಿತು.
ಖಾಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಯಲ್ಲಿ ಭಾರತದ ಪಾತ್ರವಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಆರೋಪಿಸಿರುವುದರಿಂದ ಭಾರತ-ಕೆನಡಾ ನಡುವಿನ ಬಿಕ್ಕಟ್ಟು ಮತ್ತಷ್ಟು ಉಲ್ಬಣಗೊಂಡಿದ್ದು, ರಾಜತಾಂತ್ರಿಕ ವಿವಾದವೂ ತಲೆದೋರಿದೆ.
Next Story