ಅಕ್ರಮ ವಲಸಿಗರನ್ನು ಗುರುತಿಸಲು ಮಣಿಪುರದಲ್ಲಿ NRC ಜಾರಿಗೊಳಿಸುವಂತೆ ಮೈತೇಯಿ ಸಂಘಟನೆ ಆಗ್ರಹ

PC : PTI
ಇಂಫಾಲ: ಮಯನ್ಮಾರ್ ನ ಅಕ್ರಮ ವಲಸಿಗರನ್ನು ಗುರುತಿಸಲು ಕೇಂದ್ರ ಸರಕಾರವು ಮಣಿಪುರದಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ(NRC)ಯನ್ನು ಜಾರಿಗೊಳಿಸಬೇಕು ಎಂದು ರವಿವಾರ ಮೈತೇಯಿ ಗ್ರೂಪ್ ಕೋ-ಆರ್ಡಿನೇಟಿಂಗ್ ಕಮಿಟಿ ಆನ್ ಮಣಿಪುರ್ ಇಂಟಗ್ರಿಟಿ ಆಗ್ರಹಿಸಿದೆ.
ಅಕ್ರಮ ವಲಸೆ ಹಾಗೂ ಶಸ್ತ್ರಾಸ್ತ್ರ ಮತ್ತು ಮಾದಕ ದ್ರವ್ಯ ಕಳ್ಳ ಸಾಗಣೆಯನ್ನು ತಡೆಗಟ್ಟಲು ಮಯನ್ಮಾರ್ ಹಾಗೂ ಮಣಿಪುರ ಗಡಿಯಗುಂಟ ಸಂಪೂರ್ಣವಾಗಿ ಬೇಲಿ ನಿರ್ಮಿಸಬೇಕು ಎಂದೂ ಮೈತೇಯಿ ಗ್ರೂಪ್ ಕೋ-ಆರ್ಡಿನೇಟಿಂಗ್ ಕಮಿಟಿ ಆನ್ ಮಣಿಪುರ್ ಇಂಟಗ್ರಿಟಿ ಸಂಘಟನೆಯು ಕೇಂದ್ರ ಸರಕಾರವನ್ನು ಆಗ್ರಹಿಸಿದೆ.
“ಈ ತಿಂಗಳ ಆರಂಭದಲ್ಲಿ ಕಡಂಗ್ಬಾಂದ್ ನಲ್ಲಿ ಹೊಸದಾಗಿ ಬಾಂಬ್ ದಾಳಿ ನಡೆದಿದ್ದರೂ ಕೇಂದ್ರ ಸರಕಾರ ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ಇದು ರಾಜ್ಯದ ಜನತೆ ದೇಶದ ಪ್ರಜೆಗಳಲ್ಲ ಎಂಬುದನ್ನು ಸೂಚಿಸುತ್ತಿದೆ” ಎಂದು ಸಂಘಟನೆಯ ಸಮನ್ವಯಕಾರ ಸೊಮೇಂದ್ರೊ ಥಾಕ್ ಚೋಮ್ ಅಭಿಪ್ರಾಯ ಪಟ್ಟಿದ್ದಾರೆ.
ಜನವರಿ 14ರಂದು ಮಣಿಪುರ ಇಂಫಾಲ ಪಶ್ಚಿಮ ಜಿಲ್ಲೆಯ ಕಡಂಗ್ಬಾಂದ್ ಪ್ರದೇಶದಲ್ಲಿ ಶಂಕಿತ ಬಂಡುಕೋರರು ಬಾಂಬ್ ದಾಳಿ ನಡೆಸಿದ್ದರು.