ತಮ್ಮ ಹೂಡಿಕೆಗಳು, ಉಳಿತಾಯಗಳಿಗಳ ರಕ್ಷಣೆಗೆ ಮಸೂದೆಗೆ ಆಗ್ರಹಿಸಿ ಭಾರತೀಯ ಕಾನ್ಸುಲೇಟ್ಗಳಿಗೆ ಮನವಿ ಸಲ್ಲಿಸಿದ ಎನ್ನಾರೈಗಳು
Photo credit: newindianexpress.com
ಬೆಂಗಳೂರು: ಭಾರತದಲ್ಲಿ ತಮ್ಮ ಹೂಡಿಕೆಗಳು ಮತ್ತು ಉಳಿತಾಯಗಳಿಗೆ ರಕ್ಷಣೆ ಕೋರಿ ಹಲವಾರು ಅನಿವಾಸಿ ಭಾರತೀಯರು ವಿಶ್ವದಾದ್ಯಂತ ಭಾರತೀಯ ದೂತವಾಸಿಗಳು ಕಾನ್ಸುಲೇಟ್ ಕಚೇರಿಗಳಿಗೆ ತೆರಳಿ ಮನವಿ ಸಲ್ಲಿಸಿದ್ದಾರೆ. ಸ್ವಾತಂತ್ರ್ಯೋತ್ತರ ಕಾಲದಲ್ಲಿ ಅನಿವಾಸಿ ಭಾರತೀಯರ ಅತಿ ದೊಡ್ಡ ಅಭಿಯಾನ ಇದೆಂದು ತಿಳಿಯಲಾಗಿದೆ.
“ನಾವು ಪರಿಹಾರ ಕ್ರಮಗಳನ್ನು ಕೋರಿ ಒಂದು ಗುಂಪಾಗಿ ಸಂಘಟಿತರಾಗಿದ್ದೇವೆ. ಭಾರತದಲ್ಲಿ ಪ್ರತಿ ಮೂರು ಅನಿವಾಸಿ ಭಾರತೀಯರ ಪೈಕಿ ಓರ್ವ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ನಮ್ಮ ಆರಂಭಿಕ ಅಂಕಿಅಂಶಗಳ ವಿಶ್ಲೇಷಣೆಯಿಂದ ತಿಳಿದು ಬಂದಿದೆ. ರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಗಣನೀಯ ಕೊಡುಗೆಯನ್ನು ಪರಿಗಣಿಸಿ ನಮ್ಮನ್ನು ಬೆಂಬಲಿಸುವಂತೆ ಕೇಂದ್ರ ಸರ್ಕಾರವನ್ನು ಕೋರುತ್ತೇವೆ. ನಾವು ಎತ್ತಿರುವ ವಿಚಾರಗಳನ್ನು ಪರಿಹರಿಸಲು ಎನ್ಆರ್ಐ ರಕ್ಷಣೆ ಮಸೂದೆ ಜಾರಿಗೆ ತರಬೇಕೆಂದು ಕೋರುತ್ತೇವೆ,” ಎಂದು ಮನವಿಗಳು ತಿಳಿಸಿವೆ.
ಆರಂಭದಲ್ಲಿ ಪೂರ್ವ ಏಷ್ಯಾ ಪ್ರಾಂತ್ಯಗಳಾದ ಹಾಂಕಾಂಗ್ ಮತ್ತು ಆಸ್ಟ್ರೇಲಿಯಾದ ಕೆಲವೆಡೆಗಳಲ್ಲಿನ ಭಾರತೀಯ ದೂತಾವಾಸಗಳು ಮತ್ತು ಕಾನ್ಸುಲೇಟ್ಗಳಿಗೆ ಮನವಿ ಸಲ್ಲಿಸಲಾಗಿದ್ದರೆ ನಂತರ ಮಧ್ಯ ಪೂರ್ವ, ಗಲ್ಫ್ ರಾಷ್ಟ್ರಗಳು, ಯುರೋಪ್, ಅಮೆರಿಕಾ ಮತ್ತು ಕೆನಡಾದಲ್ಲಿರುವ ಎನ್ಆರ್ಐಗಳೂ ಮನವಿ ಸಲ್ಲಿಸಿದ್ದಾರೆ.
ಅಂತಾರಾಷ್ಟ್ರೀಯ ಸಂಚಾಲಕರಾದ ಸುಭಾಸ್ ಬಾಲಪ್ಪನವರ್ ನೇತೃತ್ವದ ತಂಡದ ಸದಸ್ಯರು ಅಮೆರಿಕಾದ ಎಲ್ಲಾ ಏಳು ಭಾರತೀಯ ಕಾನ್ಸುಲಾರ್ ಕಚೇರಿಗಳಿಗೆ ತೆರಳಿ ಮನವಿ ಸಲ್ಲಿಸಿದ್ದಾರೆ.