ಒಂದು ಲಕ್ಷ ಕೋಟಿ ರೂ. ಜಿಎಸ್ಟಿ ಬಾಕಿ: ಆನ್ಲೈನ್ ಗೇಮಿಂಗ್ ಕಂಪನಿಗಳಿಗೆ ನೋಟಿಸ್ ಜಾರಿ
Representational Image (Credit: freepik.com)
ಹೊಸದಿಲ್ಲಿ: ಒಂದು ಲಕ್ಷ ಕೋಟಿ ರೂ. ತೆರಿಗೆ ವಂಚನೆಗಾಗಿ ಆನ್ಲೈನ್ ಗೇಮಿಂಗ್ ಕಂಪೆನಿಗಳಿಗೆ ಜಿಎಸ್ಟಿ ಅಧಿಕಾರಿಗಳು ನೋಟಿಸ್ ಜಾರಿಗೊಳಿಸಿದ್ದಾರೆ. ಆನ್ಲೈನ್ ಗೇಮಿಂಗ್ ಪ್ಲಾಟ್ಫಾರ್ಮ್ಗಳಲ್ಲಿ ಬೆಟ್ಟಿಂಗ್ ಮಾಡುವ ಪೂರ್ಣ ಮೊತ್ತದ ಮೇಲೆ ಶೇ.28 ಜಿಎಸ್ಟಿ ವಿಧಿಸಲಾಗುವುದೆಂದು ಜಿಎಸ್ಟಿ ಮಂಡಳಿ ಆಗಸ್ಟ್ ತಿಂಗಳಿನಲ್ಲಿ ಸ್ಪಷ್ಟಪಡಿಸಿತ್ತು.
ಜಿಎಸ್ಟಿಯನ್ನು ಸರಿಯಾಗಿ ಪಾವತಿಸದೇ ಇರುವುದಕ್ಕಾಗಿ ಡ್ರೀಮ್11, ಡೆಲ್ಟಾ ಕಾರ್ಪ್ ಮುಂತಾದ ಕಂಪೆನಿಗಳಿಗ ನೋಟಿಸ್ ಜಾರಿಯಾಗಿದೆ.
ಇನ್ನೊಂದೆಡೆ ಗೇಮ್ಸ್ಕ್ರಾಫ್ಟ್ ಕಂಪನಿಗೆ ರೂ. 21,000 ಕೋಟಿಯಷ್ಟು ತೆರಿಗೆ ವಂಚನೆಗಾಗಿ ಕಳೆದ ವರ್ಷದ ಸೆಪ್ಟೆಂಬರ್ನಲ್ಲಿ ಶೋಕಾಸ್ ನೋಟಿಸ್ ಜಾರಿಗೊಳಿಸಲಾಗಿತ್ತು.
ಈ ನಿಟ್ಟಿನಲ್ಲಿ ಕಂಪೆನಿ ನ್ಯಾಯಾಲಯದ ಮೊರೆ ಹೋದ ನಂತರ ಕರ್ನಾಟಕ ಹೈಕೋರ್ಟ್ ಕಂಪನಿ ಪರವಾಗಿ ತೀರ್ಪು ಪ್ರಕಟಿಸಿದ್ದರೂ ಕೇಂದ್ರ ಸರ್ಕಾರ ಇದರ ವಿರುದ್ಧ ಸುಪ್ರೀಂ ಕೋರ್ಟಿಗೆ ವಿಶೇಷ ಮೇಲ್ಮನವಿ ಅರ್ಜಿ ಸಲ್ಲಿಸಿತ್ತು.