ವಿಪಕ್ಷಗಳಿಗೆ ಮಾತನಾಡಲು ಅವಕಾಶ ಕಲ್ಪಿಸಿ, ಸಂವಿಧಾನ ರಕ್ಷಿಸುವ ಕರ್ತವ್ಯ ನಿರ್ವಹಿಸುತ್ತೀರಿ ಎಂಬ ವಿಶ್ವಾಸವಿದೆ: ನೂತನ ಸ್ಪೀಕರ್ ಗೆ ವಿಪಕ್ಷ ನಾಯಕ ರಾಹುಲ್ ಗಾಂಧಿ
ರಾಹುಲ್ ಗಾಂಧಿ | PC : NDTV
ಹೊಸದಿಲ್ಲಿ: “ಕಳೆದ ಬಾರಿಗಿಂತ ಈ ಬಾರಿ ವಿಪಕ್ಷಗಳು ಜನರ ಧ್ವನಿಯನ್ನು ಹೆಚ್ಚು ಗಮನಾರ್ಹವಾಗಿ ಪ್ರತಿನಿಧಿಸುತ್ತಿವೆ. ನೀವು ನಮಗೆ ಮಾತನಾಡಲು ಅವಕಾಶ ಕಲ್ಪಿಸುವಿರಿ ಎಂಬ ವಿಶ್ವಾಸವಿದೆ. ಸದನ ಎಷ್ಟು ದಕ್ಷತೆಯಿಂದ ಕಾರ್ಯನಿರ್ವಹಿಸುತ್ತದೆ ಎಂಬ ಪ್ರಶ್ನೆ ಇಲ್ಲಿಲ್ಲ. ಭಾರತದ ಧ್ವನಿಯನ್ನು ಎಷ್ಟರ ಮಟ್ಟಿಗೆ ಕೇಳಿಸಲು ಅನುಮತಿಸಲಾಗುವುದು ಎಂಬ ಪ್ರಶ್ನೆಯಿದೆ. ವಿಪಕ್ಷಗಳಿಗೆ ಮಾತನಾಡಲು ಅವಕಾಶ ಕಲ್ಪಿಸುವ ಮೂಲಕ ನೀವು ಸಂವಿಧಾನವನ್ನು ರಕ್ಷಿಸುವ ನಿಮ್ಮ ಕರ್ತವ್ಯವನ್ನು ನಿರ್ವಹಿಸುತ್ತೀರಿ ಎಂಬ ವಿಶ್ವಾಸವಿದೆ,” ಎಂದು ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಸ್ಪೀಕರ್ ಆಗಿ ಓಂ ಬಿರ್ಲಾ ಮತ್ತೆ ಆಯ್ಕೆಯಾದ ನಂತರ ಮಾತನಾಡುತ್ತಾ ಹೇಳಿದರು.
“ವಿಪಕ್ಷಗಳ ಸದ್ದಡಗಿಸಿ ಸದನವನ್ನು ಸುಗಮವಾಗಿ ನಡೆಸಬಹುದು ಎಂಬ ಕಲ್ಪನೆ ಅಸಂವಿಧಾನಿಕವಾಗಿದೆ. ವಿಪಕ್ಷಗಳು ಸಂವಿಧಾನವನ್ನು ರಕ್ಷಿಸಬೇಕೆಂದು ಈ ದೇಶದ ಜನರು ನಿರೀಕ್ಷಿಸುತ್ತಾರೆ ಎಂಬುದನ್ನು ಈ ಚುನಾವಣೆ ತೋರಿಸಿದೆ,” ಎಂದು ರಾಹುಲ್ ಗಾಂಧಿ ಹೇಳಿದರು.
Next Story