ನಿಯಂತ್ರಣ ರೇಖೆ ಬಳಿ ಪಾಕ್ ಅಪ್ರಚೋದಿತ ದಾಳಿ : ಭಾರತದ ಪ್ರತ್ಯುತ್ತರ

PC | PTI
ಶ್ರೀನಗರ : ಪಾಕಿಸ್ತಾನ ಸೇನೆ ಸತತ ಐದು ದಿನಗಳಿಂದ ಅಂದರೆ ಸೋಮವಾರ ರಾತ್ರಿ ಕೂಡಾ ವಾಸ್ತವ ನಿಯಂತ್ರಣ ರೇಖೆಯುದ್ದಕ್ಕೂ ವಿವಿಧೆಡೆಗಳಲ್ಲಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದು, ಭಾರತ ಸೇನೆ ಇದಕ್ಕೆ ಸೂಕ್ತ ಪ್ರತ್ಯುತ್ತರ ನೀಡಿದೆ. ಕುಪ್ವಾರಾ, ಬಾರಾಮುಲ್ಲಾ ಜಿಲ್ಲೆಗಳಲ್ಲಿ ಮತ್ತು ಅಖ್ನೂರ್ ವಲಯದಲ್ಲಿ ಸಂಘರ್ಷ ನಡೆದಿದೆ.
ವಾಸ್ತವ ನಿಯಂತ್ರಣ ರೇಖೆ ಬಳಿ ಕದನ ವಿರಾಮ ಉಲ್ಲಂಘಿಸಿದ ಪಾಕಿಸ್ತಾನ ಸೇನೆಗೆ ಭಾರತ ಸೂಕ್ತ ಹಾಗೂ ಪರಿಣಾಮಕಾರಿ ಪ್ರತ್ಯುತ್ತರ ನೀಡಿರುವುದಾಗಿ ಸೇನಾ ಮೂಲಗಳು ತಿಳಿಸಿವೆ.
ಎ.28-29ರ ರಾತ್ರಿ ಪಾಕಿಸ್ತಾನ ಸೇನೆ ನಡೆಸಿದ ಅಪ್ರಚೋದಿತ ಗುಂಡಿನ ದಾಳಿಗೆ ಭಾರತ ಪರಿಣಾಮಕಾರಿಯಾಗಿ ಪ್ರತ್ಯುತ್ತರ ನೀಡಿದೆ ಎಂದು ಸೇನೆ ಮಂಗಳವಾರ ಹೇಳಿಕೆ ನೀಡಿದೆ. ಕಳೆದ ಗುರುವಾರ ರಾತ್ರಿಯಿಂದೀಚೆಗೆ ಪಾಕಿಸ್ತಾನ ಸೇನೆ ಭಾರತದ ಪ್ರದೇಶದತ್ತ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದ್ದು, ಯಾವುದೇ ಸಾವು ನೋವು ಸಂಭವಿಸಿಲ್ಲ.
Next Story