ಸಂಸತ್ತಿನಲ್ಲಿನ ಘರ್ಷಣೆ | ಬಿಜೆಪಿ ಮತ್ತು ಕಾಂಗ್ರೆಸ್ ದೂರಿನ ಕುರಿತು ಕ್ರೈಂ ಬ್ರಾಂಚ್ ತನಿಖೆ : ದಿಲ್ಲಿ ಪೊಲೀಸ್
PC : PTI
ಹೊಸದಿಲ್ಲಿ : ಗುರುವಾರ ನಡೆದ ಸಂಸತ್ತಿನಲ್ಲಿನ ಘರ್ಷಣೆಯ ಕುರಿತ ತನಿಖೆಗಳನ್ನು ಅಪರಾಧ ವಿಭಾಗಕ್ಕೆ ವರ್ಗಾಯಿಸಲಾಗಿದೆ ಎಂದು ಶುಕ್ರವಾರ ದಿಲ್ಲಿ ಪೊಲೀಸರು ತಿಳಿಸಿದ್ದಾರೆ ಎಂದು ANI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಗುರುವಾರ ನಡೆದಿದ್ದ ಘರ್ಷಣೆಯ ಕುರಿತು ಬಿಜೆಪಿ ಮತ್ತು ಕಾಂಗ್ರೆಸ್ ನೀಡಿರುವ ಎರಡೂ ದೂರುಗಳ ಕುರಿತು ಅಪರಾಧ ವಿಭಾಗ ತನಿಖೆ ನಡೆಸಲಿದೆ.
ಇದಕ್ಕೂ ಮುನ್ನ, ಬಿಜೆಪಿಯ ದೂರನ್ನು ಆಧರಿಸಿ, ರಾಹುಲ್ ಗಾಂಧಿ ವಿರುದ್ಧ ದಿಲ್ಲಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದರು.
Next Story