ಹಳಿ ತಪ್ಪಿದ ಬೋಗಿ: 500 ಪ್ರಯಾಣಿಕರಿದ್ದ ವಿಲ್ಲುಪುರಂ-ಪುದುಚೇರಿ ರೈಲು
ತಪ್ಪಿದ ಭಾರೀ ದುರಂತ
Photo credit: PTI
ಚೆನ್ನೈ: ಪುದುಚೇರಿಗೆ ತೆರಳುತ್ತಿದ್ದ MEMU (ಮೇನ್ಲೈನ್ ಎಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್) ರೈಲಿನ ಕೋಚ್ ಮಂಗಳವಾರ ವಿಲ್ಲುಪುರಂ ಬಳಿ ಹಳಿತಪ್ಪಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಲೊಕೊ ಪೈಲಟ್ ಇದನ್ನು ಗಮನಿಸಿ ತ್ವರಿತವಾಗಿ ರೈಲನ್ನು ನಿಲ್ಲಿಸಿದ್ದರಿಂದ ಭಾರಿ ದುರಂತವೊಂದು ತಪ್ಪಿದಂತಾಗಿದೆ.
ಘಟನೆಯಲ್ಲಿ, ಯಾರಿಗೂ ಗಾಯಗಳಾಗಿಲ್ಲ, ಸುಮಾರು 3 ಗಂಟೆಗಳಲ್ಲಿ ಸಂಚಾರವನ್ನು ಪುನಃ ಆರಂಭಿಸಲಾಗಿದೆ. ತನಿಖೆ ಪೂರ್ಣಗೊಂಡ ನಂತರವಷ್ಟೇ ಹಳಿ ತಪ್ಪಲು ಕಾರಣ ತಿಳಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸುಮಾರು 500 ಪ್ರಯಾಣಿಕರನ್ನು ಹೊಂದಿದ್ದ ವಿಲ್ಲುಪುರಂ-ಪುದುಚೇರಿ ರೈಲು, 5.25 ಕ್ಕೆ ವಿಲ್ಲುಪುರಂನಿಂದ ಹೊರಡುವಾಗ ಒಂದು ಕೋಚ್ ಹಳಿತಪ್ಪಿದೆ ಎಂದು ವರದಿಯಾಗಿದೆ.
Next Story