2 ಹಿಂದಿ ಸುದ್ದಿ ಸಂಸ್ಥೆಗಳ ಚಾನೆಲ್ ಗಳಿಗೆ ನಿರ್ಬಂಧ ವಿಧಿಸಿದ ಯುಟ್ಯೂಬ್: ಪ್ರೆಸ್ ಕ್ಲಬ್ ಆಫ್ ಇಂಡಿಯಾ ಖಂಡನೆ
Image Credit: en.wikipedia.org
ಹೊಸದಿಲ್ಲಿ: ಎರಡು ಹಿಂದಿ ಸುದ್ದಿ ಸಂಸ್ಥೆಗಳ ಚಾನೆಲ್ ಗಳ ಮೇಲೆ ನಿರ್ಬಂಧ ವಿಧಿಸಲು ಯುಟ್ಯೂಬ್ ಗೆ ನಿರ್ದೇಶಿಸಿದ ಕೇಂದ್ರ ಮಾಹಿತಿ ಹಾಗೂ ಪ್ರಸಾರ ಸಚಿವಾಲಯ (ಎಂಐಬಿ)ದ ಕ್ರಮವನ್ನು ಪ್ರೆಸ್ ಕ್ಲಬ್ ಆಫ್ ಇಂಡಿಯಾ (ಪಿಸಿಐ) ಖಂಡಿಸಿದೆ.
ಸರಕಾರದ ಈ ಕ್ರಮವನ್ನು ಖಂಡಿಸಿರುವ ಪ್ರೆಸ್ ಕ್ಲಬ್ ಆಫ್ ಇಂಡಿಯಾ ಹಾಗೂ ಪ್ರೆಸ್ ಅಸೋಸಿಯೇಶನ್, ವಿಶೇಷವಾಗಿ 2024ರ ಲೋಕಸಭೆ ಚುನಾವಣೆಗೆ ಇನ್ನು ಕೆಲವೇ ದಿನಗಳು ಇರುವಾಗ ಇಂತಹ ಕ್ರಮ ಮಾಧ್ಯಮದ ಮೇಲಿನ ಸೆನ್ಸಾರ್ಶಿಪ್ ಹಾಗೂ ಪತ್ರಿಕಾ ಸ್ವಾತಂತ್ರ್ಯದ ಮೇಲಿನ ದಾಳಿಯಾಗಿದೆ ಎಂದು ಹೇಳಿವೆ.
3 ಲಕ್ಷಕ್ಕೂ ಅಧಿಕ ಚಂದಾದಾರರಿದ್ದ ಹಿಂದಿ ಚಾನೆಲ್ ‘ಬೋಲ್ಟಾ ಹಿಂದೂಸ್ತಾನ್’ ಅನ್ನು ಸರಕಾರದ ನಿರ್ದೇಶನದಂತೆ ಯೂಟ್ಯೂಬ್ ನಿರ್ಬಂಧಿಸಿತ್ತು. ಇದೇ ರೀತಿ 94.2 ಲಕ್ಷ ಚಂದಾದಾರರನ್ನು ಹೊಂದಿದ್ದ ಹಿಂದಿ ಚಾನೆಲ್ ‘ನ್ಯಾಷನಲ್ ದಸ್ತಕ್’ ಅನ್ನು ಕೂಡ ನಿರ್ಬಂಧಿಸಿತ್ತು.
Next Story