ಚುನಾವಣೆಗಳಿಗೆ ನಿಲ್ಲಲು ಜನರ ಬೆಂಬಲ ಬೇಕು, ಹಣವಲ್ಲ: ಡಿಎಂಕೆ
ಚುನಾವಣೆಗೆ ಸ್ಪರ್ಧಿಸಲು ತನ್ನ ಬಳಿ ಹಣವಿಲ್ಲ ಎಂದಿದ್ದ ವಿತ್ತ ಸಚಿವೆ
ಸರವಣನ್ ಅಣ್ಣಾದುರೈ | Photo: ANI
ಚೆನ್ನೈ: ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ತನ್ನ ಬಳಿ ಹಣವಿಲ್ಲ ಎಂಬ ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಹೇಳಿಕೆಗೆ ಗುರುವಾರ ಪ್ರತಿಕ್ರಿಯಿಸಿದ ಡಿಎಂಕೆ ವಕ್ತಾರ ಸರವಣನ್ ಅಣ್ಣಾದುರೈ ಅವರು, ಚುನಾವಣೆಗಳಲ್ಲಿ ಸ್ಪರ್ಧಿಸಲು ಜನಬೆಂಬಲ ಅಗತ್ಯವೇ ಹೊರತು ಹಣವಲ್ಲ ಎಂದು ಹೇಳಿದರು.
ಬಹುಶಃ ವಿತ್ತಸಚಿವೆ ಕ್ಷುಲ್ಲಕ ಕಾರಣಗಳನ್ನು ನೀಡುವ ಮೂಲಕ ಚುನಾವಣೆಗಳಲ್ಲಿ ಸ್ಪರ್ಧಿಸುವುದನ್ನು ತಪ್ಪಿಸಿಕೊಳ್ಳುತ್ತಿದ್ದಾರೆ. ಚುನಾವಣೆಗಳಲ್ಲಿ ಸ್ಪರ್ಧಿಸಲು ಹಣದ ಅಗತ್ಯವಿಲ್ಲ, ಜನರ ಬೆಂಬಲ ಬೇಕು. ಸೀತಾರಾಮನ್ ಬಳಿ ಅದು ಇಲ್ಲ ಎಂದರು.
Next Story