2ನೇ ಹಂತದ ಭಾರತ್ ಜೋಡೊ ಯಾತ್ರೆ ಡಿಸೆಂಬರ್-ಫೆಬ್ರವರಿಯಲ್ಲಿ?
Photo- PTI
ಹೊಸದಿಲ್ಲಿ: ಎರಡನೇ ಹಂತದ ಭಾರತ್ ಜೋಡೊ ಯಾತ್ರೆಯನ್ನು ಕೈಗೊಳ್ಳುವ ಬಗ್ಗೆ ಕಾಂಗ್ರೆಸ್ ಪರಿಶೀಲಿಸುತ್ತಿದೆ. ಒಂದು ವೇಳೆ ಯಾತ್ರೆ ಖಚಿತಗೊಂಡರೆ 2023 ಡಿಸೆಂಬರ್ ಮತ್ತು 2024 ಫೆಬ್ರವರಿ ನಡುವಿನ ಯಾವುದೇ ಸಮಯದಲ್ಲಿ ಅದು ಆಯೋಜನೆಯಾಗಬಹುದು ಎಂದು ಮೂಲಗಳು ಮಂಗಳವಾರ ತಿಳಿಸಿವೆ.
ರಾಹುಲ್ ಗಾಂಧಿಯ ನೇತೃತ್ವದಲ್ಲಿ ನಡೆಯುವ ಭಾರತ್ ಜೋಡೊ ಯಾತ್ರೆ 2.0 ಮಿಶ್ರ ಮಾದರಿಯದ್ದಾಗಿರುತ್ತದೆ. ಈ ಯಾತ್ರೆಯಲ್ಲಿ ಭಾಗವಹಿಸುವವರು ಪಾದಯಾತ್ರೆಯನ್ನೂ ಮಾಡುತ್ತಾರೆ, ವಾಹನಗಳಲ್ಲೂ ಸಂಚರಿಸುತ್ತಾರೆ.
ಮೊದಲ ಹಂತದ ಭಾರತ್ ಜೋಡೊ ಯಾತ್ರೆಯು 2022 ಸೆಪ್ಟಂಬರ್ 7ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಆರಂಭವಾಗಿತ್ತು. ಸುಮಾರು 4,080 ಕಿಲೋಮೀಟರ್ ಸಂಚರಿಸಿದ ಬಳಿಕ ಅದು 2023 ಜನವರಿಯಲ್ಲಿ ಶ್ರೀನಗರದಲ್ಲಿ ಸಮಾಪನಗೊಂಡಿತ್ತು.
ಯಾತ್ರೆಯು 126 ದಿನಗಳಲ್ಲಿ 12 ರಾಜ್ಯಗಳ 75 ಜಿಲ್ಲೆಗಳ ಮೂಲಕ ಸಾಗಿ ಭಾರತದ ಅತ್ಯಂತ ಉದ್ದದ ಪಾದಯಾತ್ರೆಯಾಗಿ ದಾಖಲಾಗಿತ್ತು. ಯಾತ್ರೆಯ ವೇಳೆ ಕಾಂಗ್ರೆಸ್ ನಾಯಕರು ಮತ್ತು ಇತರರು ತಳಮಟ್ಟದ ಜನರೊಡನೆ ಸಂವಹನ ನಡೆಸಿದ್ದರು.
Next Story