ಪ್ರಧಾನಿ ಯಾರ ಪರವಾಗಿಯೂ ಪ್ರಚಾರ ನಡೆಸಿಲ್ಲ : ಟ್ರಂಪ್ ಪರ ಮೋದಿ ಪ್ರಚಾರ ಆರೋಪಕ್ಕೆ ಸಂಸತ್ತಿನಲ್ಲಿ ಜೈಶಂಕರ್ ಪ್ರತಿಕ್ರಿಯೆ

ಎಸ್.ಜೈಶಂಕರ್
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಯಾರ ಪರವಾಗೂ ಪ್ರಚಾರ ನಡೆಸಿರಲಿಲ್ಲ ಎಂದು ವಿರೋಧ ಪಕ್ಷಗಳ ಆರೋಪಕ್ಕೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ತಿರುಗೇಟು ನೀಡಿದ್ದಾರೆ.
ಇದಕ್ಕೂ ಮುನ್ನ, “ಅಮೆರಿಕ ಚುನಾವಣೆ ಸಂದರ್ಭದಲ್ಲಿ ಡೊನಾಲ್ಡ್ ಟ್ರಂಪ್ ಪರ ಪ್ರಧಾನಿ ಮೋದಿ ಪ್ರಚಾರ ನಡೆಸಿದರೂ, ಡೊನಾಲ್ಡ್ ಟ್ರಂಪ್ ಭಾರತೀಯರನ್ನು ಅಗೌರವಯುತವಾಗಿ ನಡೆಸಿಕೊಂಡಿದ್ದಾರೆ ಎಂದು ರಾಜ್ಯಸಭಾ ಸಂಸದ ಹಾಗೂ ಕಾಂಗ್ರೆಸ್ ನಾಯಕ ಸೈಯದ್ ನಾಸೀರ್ ಹುಸೈನ್ ಆರೋಪಿಸಿದ್ದರು.
ಈ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಜೈಶಂಕರ್, “ಪ್ರಧಾನಿ ಮೋದಿ ಯಾರ ಪರವಾಗೂ ಪ್ರಚಾರ ನಡೆಸಿರಲಿಲ್ಲ. ಹುಸೈನ್ ತಮ್ಮ ಮಾತುಗಳನ್ನು ಹಿಂಪಡೆಯಬೇಕು” ಎಂದು ಆಗ್ರಹಿಸಿದರು.
Next Story