ಜನವರಿ 22ರಂದು ಅಯೋಧ್ಯೆಗೆ ಬರಬೇಡಿ, ಮನೆಯಲ್ಲಿ ದೀಪ ಬೆಳಗಿಸಿ: ಜನತೆಗೆ ಪ್ರಧಾನಿಯ ಮನವಿ
Photo: PTI
ಹೊಸದಿಲ್ಲಿ: ಜನವರಿ 22ರಂದು ಅಯ್ಯೋಧ್ಯೆಯಲ್ಲಿ ನಡೆಯುವ ರಾಮ ಮಂದಿರ ಪ್ರತಿಷ್ಠಾಪನಾ ಸಮಾರಂಭದಲ್ಲಿ ಭಾಗವಹಿಸಲು ಅಯೋಧ್ಯೆಗೆ ಆಗಮಿಸದಂತೆ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಮನವಿ ಮಾಡಿದ್ದಾರೆ.
“ಭಕ್ತರಾಗಿ ಶ್ರೀ ರಾಮನಿಗೆ ಯಾವುದೇ ಸಮಸ್ಯೆ ಸೃಷ್ಟಿಸಲು ನಾವು ಬಯಸುವುದಿಲ್ಲ. ನೀವೆಲ್ಲರೂ ಜನವರಿ 23ರಿಂದ ಸದಾ ಇಲ್ಲಿಗೆ ಬರಬಹುದು… ರಾಮ ಮಂದಿರ ಈಗ ಸದಾ ಇರಲಿದೆ,” ಎಂದು ಪ್ರಧಾನಿ ಹೇಳಿದರು.
ಜನವರಿ 22ರಂದು ಪ್ರತಿಯೊಬ್ಬ ಭಾರತೀಯ ತನ್ನ ಮನೆಯಲ್ಲಿ ದೀಪ ಬೆಳಗಿಸಬೇಕೆಂದೂ ಪ್ರಧಾನಿ ಹೇಳಿದರು.
ಇಂದು ಪ್ರಧಾನಿ ಅಯೋಧ್ಯೆಯಲ್ಲಿ ನೂತನ ವಿಮಾನ ನಿಲ್ದಾಣ ಹಾಗೂ ನವೀಕೃತ ರೈಲು ನಿಲ್ದಾಣವನ್ನು ಉದ್ಘಾಟಿಸಿದ್ದಾರೆ.
ಜನವರಿ 22ರಂದು ನಡೆಯಲಿರುವ ರಾಮ ಮಂದಿರ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ದೇಶಾದ್ಯಂತ 8000 ಅತಿಥಿಗಳನ್ನು ಆಹ್ವಾನಿಸಲಾಗುತ್ತಿದೆ. ರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಶೇ 15ರಷ್ಟು ಮಂದಿಯನ್ನೂ ಆಹ್ವಾನಿಸಲಾಗುವುದು ಎಂಬ ಮಾಹಿತಿಯಿದೆ.
Next Story