ಪ್ರಯಾಗ್ರಾಜ್ | ರಾಮನವಮಿ ಆಚರಣೆ ವೇಳೆ ಮಸೀದಿ ಏರಿ ಕೇಸರಿ ಧ್ವಜ ಬೀಸಿದ ಸಂಘ ಪರಿವಾರದ ಕಾರ್ಯಕರ್ತರು

PC | siasat.com
ಪ್ರಯಾಗ್ ರಾಜ್ : ರಾಮನವಮಿಯ ದಿನವಾದ ರವಿವಾರ ಜಿಲ್ಲೆಯ ಮಸೀದಿಯೊಂದರ ತುದಿಗೆ ಏರಿದ ಸಂಘ ಪರಿವಾರದ ಕಾರ್ಯಕರ್ತರು ಕೇಸರಿ ಧ್ವಜಗಳನ್ನು ಬೀಸಿರುವ ಘಟನೆ ನಡೆದಿದೆ.
ಸೈಯ್ಯದ್ ಸಲಾರ್ ಗಾಝಿ ದರ್ಗಾದ ತುದಿಗೆ ಏರಿದ ಸಂಘ ಪರಿವಾರದ ಕಾರ್ಯಕರ್ತರು ಅಲ್ಲಿಂದ ಕೇಸರಿ ಧ್ವಜಗಳನ್ನು ಬೀಸಿ, ದೊಡ್ಡ ದನಿಯಲ್ಲಿ ಜೈಶ್ರೀರಾಂ ಘೋಷಣೆ ಕೂಗುತ್ತಿರುವ ದೃಶ್ಯಾವಳಿಗಳು ಜಾಲತಾಣ ತುಣುಕಿನಲ್ಲಿ ಹರಿದಾಡುತ್ತಿದೆ.
ಸಂಘ ಪರಿವಾರದ ಕಾರ್ಯಕರ್ತರು ಮಸೀದಿಯ ಗುಮ್ಮಟವನ್ನು ಕಿತ್ತುಹಾಕಿ ದೇಗುಲ ನಿರ್ಮಾಣ ಮಾಡುವಂತೆ ಆಗ್ರಹಿಸಿದರು. ಬಳಿಕ ಅವರು ಬೈಕ್ ರ್ಯಾಲಿ ನಡೆಸಿದರು.
ಮಹಾರಾಷ್ಟ್ರದ ರಹೂರಿ ಜಿಲ್ಲೆಯಲ್ಲಿ ಕೂಡಾ ಮಾ. 26ರಂದು ಇಂಥದ್ದೇ ಘಟನೆ ವರದಿಯಾಗಿತ್ತು. ಸಂಘ ಪರಿವಾರದ ಕಾರ್ಯಕರ್ತರು ಹಝ್ರತ್ ಅಹ್ಮದ್ ಚಿಷ್ತಿ ದರ್ಗಾಕ್ಕೆ ಭೇಟಿ ನೀಡಿ ಹಸಿರು ಧ್ವಜವನ್ನು ಕಿತ್ತುಹಾಕಿ ಕೇಸರಿ ಧ್ವಜಾರೋಹಣ ಮಾಡಿದ್ದರು.
ಘಟನೆ ಬೆನ್ನಲ್ಲೇ ಪೊಲೀಸರು ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಿದ್ದಾರೆ. ಆದರೆ ಇದುವರೆಗೆ ಈ ಸಂಬಂಧ ಅಥವಾ ಕಲ್ಲುತೂರಾಟದ ಸಂಬಂಧ ಯಾವುದೇ ವ್ಯಕ್ತಿಗಳನ್ನು ಬಂಧಿಸಿಲ್ಲ.
Members of a Hindutva organisation, in large numbers, climbed atop a mosque waving saffron flags while celebrating Ram Navami in Uttar Pradesh's Prayagraj district on Sunday.Visuals show the right-wing participants climbing the Syed Salar Ghazi Dargah and waving saffron flags,… pic.twitter.com/5bPCjGslwG
— The Siasat Daily (@TheSiasatDaily) April 6, 2025