ಮುನ್ನೆಚ್ಚರಿಕಾ ವಶದ ಆದೇಶಗಳನ್ನು ಅತ್ಯಂತ ಎಚ್ಚರಿಕೆಯಿಂದ ನೀಡಬೇಕು : ಬಾಂಬೆ ಹೈಕೋರ್ಟ್
ಬಾಂಬೆ ಹೈಕೋರ್ಟ್ | PTI
ಮುಂಬೈ: ಮುನ್ನೆಚ್ಚರಿಕಾ ವಶದ ಆದೇಶಗಳನ್ನು ಅತ್ಯಂತ ಎಚ್ಚರಿಕೆಯಿಂದ ನೀಡಬೇಕು ಎಂದು ಪ್ರಾಧಿಕಾರಗಳಿಗೆ ಸೂಚಿಸಿರುವ ಬಾಂಬೆ ಹೈಕೋರ್ಟ್, ಈ ವಿಷಯದಲ್ಲಿ ಉಡಾಫೆಯ ಧೋರಣೆಯನ್ನು ಪ್ರದರ್ಶಿಸುವುದು ವ್ಯಕ್ತಿಯೊಬ್ಬನ ಅತ್ಯಂತ ಅಮೂಲ್ಯ ಮೂಲಭೂತ ಹಕ್ಕುಗಳು, ಆತನ ಸ್ವಾತಂತ್ರ್ಯ ಹಾಗೂ ಮುಕ್ತತೆಯನ್ನು ನಿರಾಕರಿಸುತ್ತದೆ ಎಂದು ಅಭಿಪ್ರಾಯ ಪಟ್ಟಿದೆ.
ಅಕ್ಟೋಬರ್, 2023ರಲ್ಲಿ ವ್ಯಕ್ತಿಯೊಬ್ಬರ ವಿರುದ್ಧ ಜಾರಿಗೊಳಿಸಲಾಗಿದ್ದ ಮುನ್ನೆಚ್ಚರಿಕಾ ವಶದ ಆದೇಶವನ್ನು ಜುಲೈ 2ರಂದು ರದ್ದುಗೊಳಿಸಿರುವ ಬಾಂಬೆ ಹೈಕೋರ್ಟ್, ಆ ವ್ಯಕ್ತಿಗೆ ಈ ಆದೇಶದ ವಿರುದ್ಧ ಮನವಿ ಸಲ್ಲಿಸಲು ಅವಕಾಶ ನೀಡದೆ ಇರುವುದರಿಂದ ಆತನನ್ನು ಬಿಡುಗಡೆಗೊಳಿಸಬೇಕು ಎಂದು ಆದೇಶಿಸಿತ್ತು.
ಮುನ್ನೆಚ್ಚರಿಕಾ ವಶದ ಆದೇಶವನ್ನು ಜಾರಿಗೊಳಿಸುವಾಗ ಪ್ರಾಧಿಕಾರಗಳು ಜವಾಬ್ದಾರಿಯುತವಾಗಿರಬೇಕು ಎಂದು ತಾನು ಹೇಳಿದ್ದು, ಇಂತಹ ಆದೇಶಗಳು ವ್ಯಕ್ತಿಯೊಬ್ಬನ ಅತ್ಯಂತ ಮೌಲ್ಯಯುತ ಹಕ್ಕಾದ ಮುಕ್ತತೆಯಿಂದ ನಿರಾಕರಿಸಲ್ಪಡುತ್ತಾನೆ ಎಂದು ಬಾಂಬೆ ಹೈಕೋರ್ಟ್ ಹೇಳಿದೆ.
"ಪ್ರಾಧಿಕಾರಗಳು ಅತ್ಯಂತ ಎಚ್ಚರಿಕೆ ಮತ್ತು ಕಾಳಜಿಯಿಂದ ವರ್ತಿಸಬೇಕು ಹಾಗೂ ವ್ಯಕ್ತಿಯೊಬ್ಬನ ವಶವು ದೊಡ್ಡ ಮಟ್ಟದ ಹಿತಾಸಕ್ತಿಯನ್ನು ಹೊಂದಿರಬೇಕು. ಈ ವಶವು ಕಟ್ಟುನಿಟ್ಟಾಗಿ ವಶಕ್ಕೆ ಪಡೆಯುವ ಕಾನೂನಿನ ಗುರಿಯನ್ನು ಸಾಧಿಸುವ ಉದ್ದೇಶವನ್ನು ಈಡೇರಿಸಬೇಕು" ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿತು.