ವಕ್ಫ್ ಕಾಯಿದೆ ರದ್ದುಗೊಳಿಸಲು ಖಾಸಗಿ ಸದಸ್ಯರ ಮಸೂದೆ ರಾಜ್ಯಸಭೆಯಲ್ಲಿ ಮಂಡನೆ
ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ವಕ್ಫ್ ಕಾಯಿದೆ, 1995 ಇದನ್ನು ರದ್ದುಗೊಳಿಸಲು ಕೋರುವ ಖಾಸಗಿ ಸದಸ್ಯರ ಮಸೂದೆಯೊಂದನ್ನು ರಾಜ್ಯಸಭೆಯಲ್ಲಿ ವಿಪಕ್ಷಗಳ ತೀವ್ರ ಆಕ್ಷೇಪಗಳ ನಡುವೆ ಮಂಡನೆಯಾಗಿದೆ.
ಬಿಜೆಪಿ ಸದಸ್ಯ ಹರನಾಥ್ ಸಿಂಗ್ ಯಾದವ್ ಅವರು ವಕ್ಫ್ ರದ್ದುಗೊಳಿಸುವ ಮಸೂದೆ 2022 ಅನ್ನು ಮಂಡಿಸಿದರು. ಕಾಂಗ್ರೆಸ್, ಟಿಎಂಸಿ, ಡಿಎಂಕೆ, ಸಿಪಿಐ, ಸಿಪಿಐ (ಎಂ) ಮತ್ತು ಆರ್ಜೆಡಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ನಂತರ ಮತಗಳ ವಿಭಜನೆ ನಡೆಯಿತು.
ಹೆಚ್ಚಾಗಿ ಆಡಳಿತ ಪಕ್ಷದ 53 ಸದಸ್ಯರ ಬೆಂಬಲದೊಂದಿಗೆ ಮಸೂದೆಯನ್ನು ಮಂಡಿಸಲಾಯಿತು. ಇದಕ್ಕೆ 32 ಸದಸ್ಯರು ವಿರೋಧಿಸಿದ್ದರು.
ಮಸೂದೆ ಮೇಲಿನ ಚರ್ಚೆ ಮುಂದೆ ನಡೆಯಲಿದೆ.
Next Story